Puneeth Namana: ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ಕಾರ್ಯಕ್ರಮದ ಆಮಂತ್ರಣ

ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್‌ (CADD Nest Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಕನ್ನಡದ ಪವರ್‌ಸ್ಟಾರ್‌ ದಿವಂಗತ ಡಾ. ಪುನೀತ್‌ ರಾಜ್‌ ಕುಮಾರ್‌ಗೆ ಅರ್ಪಿಸುತ್ತಿದೆ.

ಇದೇ ಶನಿವಾರ , ಏಪ್ರಿಲ್‌ 1ರಂದು ನಡೆಯಲಿರುವ ಪುನೀತ ನಮನ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವವನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ.

(ಅಪ್‌ಡೇಟ್:‌ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಭಾಸ್ಕರ್‌ ರಾವ್‌ ಐಪಿಎಸ್‌ (ನಿ ) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಉಳಿದಂತೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ- ಪ್ರಕಾಶ್‌ ಎಚ್‌ಎಂ, ಎಂಡಿ, ಕ್ಯಾಡ್‌ನೆಸ್ಟ್)

ಪುನೀತ ನಮನ ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಯುವ ರಾಜಕುಮಾರ್ ರವರು ಚಾಲನೆ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದರೆ.

“ಕೌಶಲ ತರಬೇತಿ ಕ್ಷೇತ್ರದಲ್ಲಿ ಹತ್ತು ಹಲವು ವರ್ಷಗಳ ಅನುಭವದಿಂದ ಎರಡು ವರ್ಷದ ಹಿಂದೆ ಯುಗಾದಿ ಹಬ್ಬದ ಸಮಯದಲ್ಲಿ ಆರಂಭಿಸಿದ ಕ್ಯಾಡ್‌ನೆಸ್ಟ್‌ ಇದೀಗ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ನಮ್ಮೆಲ್ಲರ ಪ್ರೀತಿಯ ಪುನೀತ್‌ ಸರ್‌ಗೆ ಈ ಕಾರ್ಯಕ್ರಮವನ್ನು ಅರ್ಪಿಸಿ ಪುನೀತ ನಮನ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಈಗಾಗಲೇ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಪವರ್‌ ಸ್ಟಾರ್‌ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಎಂದು ಕ್ಯಾಡ್‌ನೆಸ್ಟ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಎಚ್‌.ಎಂ ಹೇಳಿದ್ದಾರೆ.

ಖ್ಯಾತ ಜ್ಯೋತಿಷಿ ಎಸ್‌.ಕೆ. ಜೈನ್‌, ಭಾಸ್ಕರ್‌ ರಾವ್‌ ಐಪಿಎಸ್‌ (ನಿ )ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಎಕ್ಸಲೆಂಟ್‌ ಆಂಗ್ಲ ಪ್ರೌಢಶಾಲೆಯ ಕಾರ್ಯದರ್ಶಿ ವೆಂಕಟರಾಮೇ ಗೌಡ, ಚೈತನ್ಯ ಇಂಟರ್‌ನ್ಯಾಷನಲ್‌ ಆರ್ಟ್ಸ್‌ ಅಕಾಡೆಮಿಯ ಡಾ. ವಸುಧಾ ಶ್ರೀನಿವಾಸ್‌, ಕಿರುತೆರೆ ನಟರಾದ ರೂಪೇಶ್‌, ನಮ್ಮ ಸೂಪರ್‌ ಸ್ಟಾರ್‌ ಸ್ಟಾರ್‌ ಕನ್ನಡದ ಸಿ ಇ ಓ ಅಸ್ಲಾಂ ರವರು ಮತ್ತಿತ್ತರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ.

“ನಮ್ಮ ಹಿಂದಿನ ಪವರ್‌ ಸ್ಟಾರ್‌ ಉದ್ಯೋಗ ಮೇಳದಲ್ಲಿ ಸಾಕಷ್ಟುಅಭ್ಯರ್ಥಿಗಳಿಗೆ ಪ್ಲೇಸ್‌ಮೆಂಟ್‌ ಆಗಿದೆ. ಬೆಂಗಳೂರಿನ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುವಾಗ ಸಂತೋಷವಾಗುತ್ತಿದೆ. ಇದೇ ಕಾರಣಕ್ಕೆ ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವವನ್ನು ಪುನೀತ ನಮನ ಹೆಸರಿನಲ್ಲಿ ಆಯೋಜಿಸಿದ್ದೇವೆ. ಎಲ್ಲರಿಗೂ ಪ್ರೀತಿಯ ಸ್ವಾಗತ” ಎಂದು ಕ್ಯಾಡ್‌ನೆಸ್ಟ್‌ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ಜ್ಯೋತಿ ವಿಜೆ ಹೇಳಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳ: ಡಾ. ಅಂಬರೀಷ್‌ ಅಡಿಟೋರಿಯಂ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ(ರಿ). ಚಾಮರಾಜಪೇಟೆ, ಬೆಂಗಳೂರು
ಸಮಯ: ಅಪರಾಹ್ನ 2 ಗಂಟೆ
ದಿನಾಂಕ: ಏಪ್ರಿಲ್‌ 1, 2023