ದಾವಣಗೆರೆಯಲ್ಲಿ ಎಂಆರ್ ಪಿಎಲ್ ನ ಎಥೆನಾಲ್ ಉತ್ಪಾದನಾ ಘಟಕ

2ಜಿ ಎಥೆನಾಲ್ ಉತ್ಪಾದನೆಯತ್ತ ದೇಶದ ಪ್ರಮುಖ ರಿಫೈ‌ನರಿಗಳಲ್ಲೊಂದಾದ ಎಂಆರ್ ಪಿಎಲ್ ತಮ್ಮ ಗಮನವನ್ನು ಹರಿಸಿದ್ದು, 5 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಘಟಕ ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿದೆ.

2 ಜಿ ಎಥೆನಾಲ್ ಉತ್ಪಾದನಾ ಘಟಕವನ್ನು ದಾವಣಗೆರೆ ಹರಿಹರದಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ 50 ಎಕರೆ ಭೂಮಿ ಗುರುತಿಸಲಾಗಿದೆ. ಎಂಆರ್ ಪಿಎಲ್ ಕಾರ್ಪೊರೇಟ್ ಕಮ್ಯುನಿಕೇಶನ್ ನ ಮಹಾ ಪ್ರಬಂಧಕ ರುಡಾಲ್ಫ್ ನೊರೊನ್ಹಾ ಅವರು ಈ ವಿಷಯವಾಗಿ ಒಟ್ 60 ಕಿಲೋ ಲೀಟರ್ ( 60 ಕೆಎಲ್ ಪಿಡಿ) ಉತ್ಪಾದನಾ ಸಾಮರ್ಥ್ಯದ ಘಟಕ ಇಲ್ಲಿ ಸ್ಥಾಪನೆಗೊಳ್ಳಲಿದೆ ಎಂದರು. 60 ಕೆಎಲ್ ಪಿಡಿ‌ ಎಥೆನಾಲ್ ಉತ್ಪಾದಿಸುವುದಕು ಪ್ರತಿದಿನ 250 ರಿಂದ 300 ಟನ್ ಬೆಳೆ ತ್ಯಾಜ್ಯಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಹತ್ತಿ, ಮೆಕ್ಕೆಜೋಳದ ತ್ಯಾಜ್ಯ ಸಾಕಷ್ಟು ಪ್ರಮಾಣದಲ್ಲಿ ‌ದಾವಣಗೆರೆಯಲ್ಲಿ ಲಭ್ಯವಿರುವ ಕಾರಣದಿಂದಲೇ ಈ ಜಾಗವನ್ನು ಅಂತಿಮ ಎಂದು ತೀರ್ಮಾನಿಸಲಾಗಿದೆ.

ಸಿಮೆಯ ಕೈಗಾರಿಕೆಗಳು ಈ ಸ್ಥಾವರದ ಬೂದಿಯನ್ನು ಬಳಸಿಕೊಳ್ಳಬಹುದು. ಒಂದು ವೇಳೆ ಈ ಯೋಜನೆ ಇಲ್ಲಿಗೆ ಬಂದರೆ ರೈತರು ಬೆಳೆಸುವ ಹತ್ತಿ, ಕಬ್ಬು, ಮೆಕ್ಕೆಜೋಳ ದಂತಹ ಬೆಳೆಗಳಿಗೆ ಬೇಡಿಕೆ ಏರುವುದು.