ರೇಷನ್ ಕಾರ್ಡ್ ಗೆ ಆಧಾರ್ ಜೋಡಿಸಲು ( ಇ-ಕೆವೈಸಿ) ಇವತ್ತು ಕೊನೆಯ ದಿನ

ಬೆಂಗಳೂರು : ರೇಷನ್ ಕಾರ್ಡ್‌ಗೆ ಆದಾರ್ ಜೋಡಿಸಲು ( ಇ-ಕೆವೈಸಿ) ಗೆ ಮಂಗಳವಾರ ಕಡೇ ದಿನ.

ಮುಂದಿನ ಹಂತದಲ್ಲಿ ಪಡಿತರ ವಿತರಣೆಯನ್ನೇ ತಾತ್ಕಾಲಿಕವಾಗಿ ತಡೆಹಿಡಿಯಲು ಸರಕಾರ ತೀರ್ಮಾನ ಕೈಗೊಂಡಿದೆ.

ಇಲ್ಲಿಯವರೆಗೆ ಇ-ಕೆವೈಸಿ ಪ್ರಕ್ರಿಯೆ ಶೇ. 70 ರಷ್ಟು ಮುಗಿದಿದ್ದು, ಪ್ರಕ್ರಿಯೆ ಸಂಪೂರ್ಣಗೊಂಡರೆ ಸರಕಾರಕ್ಕೆ 250 ಕೋಟಿ ಉಳಿತಾಯವಾಗಲಿದೆ.

ರೇಷನ್ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಬೇಕು. ಸರಕಾರವು‌ ಪ್ರತಿ ಫಲಾನುಭವಿಯ ದೃಢೀಕರಣಕ್ಕೆ 5 ರೂ.ನಂತೆ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ನೋಂದಣಿಗೆ ಗರಿಷ್ಠ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸುತ್ತದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಐಕೆವೈಸಿ ಮಾಡಿಸತಕ್ಕದ್ದು. ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ದೊರಕುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ನೀಡಬೇಕು. ಎಲ್ಲಾ‌ಫಲಾನುಭವಿಗಳು ಗ್ಯಾಸ್ ಸಂಪರ್ಕದ ಮಾಹಿತಿಯನ್ನು ನೀಡಬೇಕು.