Karnataka

ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಗೆ ಜನ ಜಮಾಯಿಸುತ್ತಿರುವುದರಿಂದ ಕೂಲಿಕಾರರ ನಿರ್ವಹಣೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಷ್ಟಕರವಾಗಿದೆ. ಕಾರ್ಯ ಸ್ಥಳದ ‌ನಿರ್ವಹಣೆಗೆ ಹಾಗೂ 20-25 ಜನ ಕೂಲಿಕಾರರನ್ನು ಸಂಘಟಿಸಲು ಕಾಯಕ ಬಂಧುಗಳನ್ನು ನೇಮಕ ಮಾಡಲಾಗುತ್ತಿದೆ. ಈ ಕಾಯಕ ಬಂಧುವಿಗೆ ಅಕುಶಲ ಕೂಲಿಯ ಜೊತೆಗೆ ಕೂಲಿಕಾರರ ಗುಂಪಿನಿಂದ ಸೃಜನೆಯಾದ ಪ್ರತಿ ಮಾನವ ದಿನಕ್ಕೆ ಪುರುಷ ಕಾಯಕ ಬಂಧುವಿಗ 4 ರೂ. ಮತ್ತು ಮಹಿಳಾ ಕಾಯಕ ಬಂಧುವಿಗೆ ರೂ. 5 ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತದೆ. […]

ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ Read More »

ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದಾಗಿ ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರಾವಳಿಯ ‌ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಆ.7 , 8 ರಂದು ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ 5 ದಿನಗಳಲ್ಲಿ ಮಲೆನಾಡು ಭಾಗ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 72 ಗಂಟೆ ಆಗಾಗ್ಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ Read More »

ದಾವಣಗೆರೆಯಲ್ಲಿ ಎಂಆರ್ ಪಿಎಲ್ ನ ಎಥೆನಾಲ್ ಉತ್ಪಾದನಾ ಘಟಕ

2ಜಿ ಎಥೆನಾಲ್ ಉತ್ಪಾದನೆಯತ್ತ ದೇಶದ ಪ್ರಮುಖ ರಿಫೈ‌ನರಿಗಳಲ್ಲೊಂದಾದ ಎಂಆರ್ ಪಿಎಲ್ ತಮ್ಮ ಗಮನವನ್ನು ಹರಿಸಿದ್ದು, 5 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಘಟಕ ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿದೆ. 2 ಜಿ ಎಥೆನಾಲ್ ಉತ್ಪಾದನಾ ಘಟಕವನ್ನು ದಾವಣಗೆರೆ ಹರಿಹರದಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ 50 ಎಕರೆ ಭೂಮಿ ಗುರುತಿಸಲಾಗಿದೆ. ಎಂಆರ್ ಪಿಎಲ್ ಕಾರ್ಪೊರೇಟ್ ಕಮ್ಯುನಿಕೇಶನ್ ನ ಮಹಾ ಪ್ರಬಂಧಕ ರುಡಾಲ್ಫ್ ನೊರೊನ್ಹಾ ಅವರು ಈ ವಿಷಯವಾಗಿ ಒಟ್ 60 ಕಿಲೋ ಲೀಟರ್ ( 60 ಕೆಎಲ್ ಪಿಡಿ) ಉತ್ಪಾದನಾ

ದಾವಣಗೆರೆಯಲ್ಲಿ ಎಂಆರ್ ಪಿಎಲ್ ನ ಎಥೆನಾಲ್ ಉತ್ಪಾದನಾ ಘಟಕ Read More »

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಲು ಶೋಭಾಕರಂದ್ಲಾಜೆ ಮನವಿ

ಕೆಆರ್ ಸಿಎಲ್ ( ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ) ಅನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕು ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಅವರಿಗೆ‌ ಮನವಿಯನ್ನು ಸಲ್ಲಿಸಿದ್ದಾರೆ. ಕರ್ನಾಟಕದ ಕರಾವಳಿ ಭಾಗದ ಜ‌ನರ ಆಶೋತ್ತರಗಳನ್ನು ಸಫಲಗೊಳಿಸುವಲ್ಲಿ ಕೆಆರ್ ಸಿಎಲ್ ವಿಫಲವಾಗಿರುವುದರಿಂದ ಇದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವುದು ಸೂಕ್ತ ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೆಆರ್ ಸಿಎಲ್ ವಿಫಲವಾಗಿರುವುದರಿಂದ ಇದನ್ನು ನೈರುತ್ಯ

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಲು ಶೋಭಾಕರಂದ್ಲಾಜೆ ಮನವಿ Read More »

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಗೆ ಇಡಿ ದಾಳಿ ಬೆನ್ನಲ್ಲೇ, ರೋಷನ್ ಬೇಗ್ ಮನೆಗೂ ಇಡಿ ದಾಳಿ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಗೆ ಜಾರಿ ನಿರ್ದೆಶನಾಲಯ ಅಧಿಕಾರಿಗಳು ದಾಳಿ ಮಾಡಿದ ಬೆನ್ನಲ್ಲೇ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರೋಷನ್ ಬೇಗ್ ಅವರ ಶಿವಾಜಿನಗರದ ಮನೆಯ ಮೇಲೆ ಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳ ಮೂಲಕ ತಿಳಿದು ಬಂದಿದೆ. 6 ಕಡೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ವಿದೇಶಿ ವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ದಾಳಿ

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಗೆ ಇಡಿ ದಾಳಿ ಬೆನ್ನಲ್ಲೇ, ರೋಷನ್ ಬೇಗ್ ಮನೆಗೂ ಇಡಿ ದಾಳಿ Read More »

ದಕ್ಷಿಣ ಕನ್ನಡದಲ್ಲಿ ಕೊರೋನಾ ಹೆಚ್ಚಳದಿಂದಾಗಿ ವಾರಾಂತ್ಯ ದೇವಾಲಯಗಳು ಬಂದ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ – 19 ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜಿಲ್ಲೆಯ ದೇವಸ್ಥಾನಗಳಿಗೆ ಆಗಸ್ಟ್ 15 ರವರೆಗೆ ಕೆಲವು ನಿರ್ಬಂಧಗಳನ್ನು ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ದೇವಸ್ಥಾನವು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಬುಧವಾರ ಆದೇಶ ಹೊರಡಿಸಿದ್ದಾರೆ. ತೀರ್ಥ ಪ್ರಸಾದ, ಅನ್ನಸಂತರ್ಪಣೆ ಭಕ್ತರಿಗೆ ಲಭ್ಯವಿರುವುದಿಲ್ಲ. ಸಾಮಾಜಿಕ ಅಂತರ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಭಕ್ತರು ಅನುಸರಿಸಬೇಕು.

ದಕ್ಷಿಣ ಕನ್ನಡದಲ್ಲಿ ಕೊರೋನಾ ಹೆಚ್ಚಳದಿಂದಾಗಿ ವಾರಾಂತ್ಯ ದೇವಾಲಯಗಳು ಬಂದ್ Read More »

29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನೂತನ ಸಂಪುಟ ರಚನೆಯಲ್ಲಿ ಮೊದಲಿಗೆ 29 ಸಚಿವರಿಗೆ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ವಿಧಿ ಬೊಧಿಸಿದರು. ಈ ಬಾರಿ 7 ಸಚಿವ ಸ್ಥಾನ ಬೆಂಗಳೂರು ನಗರಕ್ಕೆ ದೊರಕಿದೆ. ದಾವಣಗೆರೆ, ಕೋಲಾರ, ಚಿಕ್ಕಮಗಳೂರು, ಯಾದಗಿರಿ, ಬಳ್ಳಾರಿ, ಮೈಸೂರು, ರಾಮನಗರ, ಕೊಡಗು, ರಾಯಚೂರು, ವಿಜಯಪುರ, ಬಳ್ಳಾರಿ ,ಹಾಸನ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿಲ್ಲ. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ, ಆರ್. ಅಶೋಕ್ – ಪದ್ಮನಾಭ

29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ Read More »

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪ್ರಕಟ, 29 ನೂತನ ಸಚಿವರಿಗೆ ಅವಕಾಶ

ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ಪ್ರಕಟಗೊಂಡಿದೆ. ಹಿರಿಯ ಸಚಿವರಿಗೆ ಕೊಕ್‌ ನೀಡಲಾಗಿದೆ. ಅಚ್ಚರಿಯೆಂಬಂತೆ ಎಸ್‌. ಸುರೇಶ್‌ ಕುಮಾರ್‌, ಸಿ.ಪಿ. ಯೋಗೇಶ್ವರ, ಅರವಿಂದ ಲಿಂಬಾವಳಿ, ಜಗದೀಶ್‌ ಶೆಟ್ಟರ್‌ ಮುಂತಾದವರು ಸಂಪುಟದಿಂದ ಹೊರಗುಳಿದಿದ್ದಾರೆ. ಆಯ್ಕೆಯಾದ ನೂತನ ನಾಯಕರ ವಿವರ ಮುಂದಿದೆ. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ ಆರ್.ಅಶೋಕ್- ಪದ್ಮನಾಭ ನಗರ ಎಸ್.ಟಿ.ಸೋಮಶೇಖರ್- ಯಶವಂತಪುರ ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ ಬೈರತಿ‌ ಬಸವರಾಜ – ಕೆ ಆರ್ ಪುರಂ ಬಿ.ಸಿ ಪಾಟೀಲ – ಹಿರೇಕೇರೂರು ಡಾ.ಸಿ.ಎನ್.ಅಶ್ವತ್ಥ ನಾರಾಯಣ –

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪ್ರಕಟ, 29 ನೂತನ ಸಚಿವರಿಗೆ ಅವಕಾಶ Read More »

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ, ಯಾರು ಮುಂದಿನ ಮುಖ್ಯಮಂತ್ರಿ?

ಕರ್ನಾಟಕದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರೀಯರಾಗಿದ್ದ, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ರೈತ ನಾಯಕ ಎಂದೇ ಜನಪ್ರಿಯತೆ ಪಡೆದಿದ್ದ ಬಿಎಸ್‌ ಯಡಿಯೂರಪ್ಪ ಇಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೆ ಯಡಿಯೂರಪ್ಪನವರು ಹಂಗಾಮಿ ಮುಖ್ಯಮಂತ್ರಿಯಾಗಿಯೇ ಮುಂದುವರೆಯಲಿದ್ದಾರೆ. ೭೧ ವರ್ಷ ವಯಸ್ಸಿನ ಹಿರಿಯ ರಾಜಕಾರಣಿಯಾಗಿದ್ದರೂ, ರಾಜ್ಯದಲ್ಲಿ ಚುರುಕಾಗಿ ಆಡಳಿತ ನಡೆಸುತ್ತಿದ್ದರು. ಇವರ ನಂತರ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುರಿತು ಚರ್ಚೆ ರಾಜ್ಯದಲ್ಲಿ ಬಿಸಿಯೇರಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ, ಯಾರು ಮುಂದಿನ ಮುಖ್ಯಮಂತ್ರಿ? Read More »