MANMUL Recruitment 2022- ಮಂಡ್ಯ ಹಾಲು ಒಕ್ಕೂಟ ದಲ್ಲಿ ಭರ್ಜರಿ ನೇಮಕಾತಿ, 187 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಗೆಜ್ಜಲಗೆರೆಯು ಭರ್ಜರಿ ನೇಮಕಕ್ಕೆ ಚಾಲನೆ ನೀಡಿದ್ದು, ವಿವಿಧ 187 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ವಿದ್ಯಾರ್ಹತೆ, ಹುದ್ದೆಗಳ ವರ್ಗೀಕರಣ ಸೇರಿದಂತೆ ಸಂಪೂರ್ಣ ವಿವರಗಳನ್ನು ಈ ಮುಂದೆ ನೀಡಲಾಗಿದೆ. ವಿದ್ಯಾರ್ಹತೆ ಮಾಹಿತಿ ಸೇರಿದಂತೆ ಸಂಪೂರ್ಣ ವಿವರವನ್ನು ಮಾನ್ಮೂಲ್‌ ತನ್ನ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲಿ ಪ್ರಕಟಿಸಲಿದೆ.

ಒಟ್ಟು ಹುದ್ದೆಗಳು: 187
ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
ಅರ್ಜಿ ಸಲ್ಲಿಸಲು ಆರಂಭ: ಫೆಬ್ರವರಿ ೧, ೨೦೨೨
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ ೨, ೨೦೧೩

ಹುದ್ದೆಗಳ ವಿವರ

ಸಹಾಯಕ ವ್ಯವಸ್ಥಾಪಕರು, ಕಾನೂನು ಅಧಿಕಾರಿ, ತಾಂತ್ರಿಕ ಅಧಿಕಾರಿ (ಡಿಟಿ), ಉಗ್ರಾಣಾಧಿಕಾರಿ/ಐಎಂ ಅಧಿಕಾರಿ, ಡೇರಿ ಪರಿವೀಕ್ಷಕರು ದರ್ಜೆ-೨ ಸಿವಿಲ್‌/ಎಲೆಕ್ಟ್ರಾನಿಕ್ಸ್‌ ಆಂಡ್‌ ಇನ್‌ಸ್ಟ್ರುಮೆಂಟೆಷನ್‌/ ಎಲೆಕ್ಟ್ರಿಕಲ್‌ ಆಂಡ್‌ ಎಲೆಕ್ಟ್ರಾನಿಕ್ಸ್‌, ವಿಸ್ತರಣಾಧಿಕಾರಿ, ಆಡಳಿತ ಸಹಾಯಕ ದರ್ಜೆ, ಲೆಕ್ಕ ಸಹಾಯಕ, ಜೂನಿಯರ್ ಟೆಕ್ನಿಷಿಯನ್‌, ಕೆಮಿಸ್ಟ್‌, ಜೂನಿಯರ್‌ ಸಿಸ್ಟಮ್‌ ಆಪರೇಟರ್‌, ಕೋ ಆರ್ಡಿನೇಟರ್‌, ಆರೋಗ್ಯ ನಿರೀಕ್ಷಕರು, ನರ್ಸ್, ಮಾರುಕಟ್ಟೆ ಸಹಾಯಕ, ಚಾಲಕರು, ಕೃಷಿ ಸಹಾಯಕ, ತೋಟಗಾರಿಕೆ ಸಹಾಯಕ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಖುದ್ದಾಗಿ, ಅಂಚೆ ಮೂಲಕ, ಕೊರಿಯರ್‌ ಮೂಲಕ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲವೆಂದು ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತವು ಉದ್ಯೋಗ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಹೆಚ್ಚಿನ ವಿವರಕ್ಕೆ ಭೇಟಿ ನೀಡಬೇಕಾದ ವೆಬ್‌: