ಪಠ್ಯಪುಸ್ತಕಗಳಲ್ಲಿ ಬಾಬಾಬುಡನ್ ಗಿರಿ ಹೆಸರು ಬದಲಿಸಲು ಶಿಕ್ಷಣ ಸಚಿವರ ಸೂಚನೆ – ಸುದ್ದಿಜಾಲ ನ್ಯೂಸ್

ಬೆಂಗಳೂರು : ವಿವಿಧ ತರಗತಿಗಳ ಪಠ್ಯಪುಸ್ತಕಗಳಲ್ಲಿ ಇರುವ ಬಾಬಾಬುಡನ್ ಗಿರಿ ಹೆಸರು ಬದಲಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚನೆ ನೀಡಿದ್ದಾರೆ. ರಾಜ್ಯದ ಶಾಲಾ ತರಗತಿಗಳ ಪಠ್ಯಪುಸ್ತಕಗಳಲ್ಲಿ ಇರುವ ಬಾಬಾಬುಡನ್ ಗಿರಿ ಬದಲಾಗಿ ಸರಕಾರದ ಅಧಿಕೃತ ದಾಖಲೆಗಳಲ್ಲಿ ಇರುವಂತೆಯೇ ಪಠ್ಯಪುಸ್ತಕಗಳಲ್ಲಿಯೂ ಇರಬೇಕು ಎಂದು ನಿರ್ದೇಶನ ನೀಡಿದ್ದಾರೆ.

4, 6 ಮತ್ತು 9 ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಬಾಬಾಬುಡನ್ ಗಿರಿ ಹೆಸರು ಬದಲಿಸುವಂತೆ ಸೂಚಿಸಲಾಗಿದೆ.

ಬಾಬಾಬುಡನ್ ಗಿರಿ ಬದಲು ಇನಾಮ್ ದತ್ತಾತ್ರೇಯ ಪೀಠ ಎಂದು ಮುದ್ರಿಸಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.