1947 ರ ನಂತರ ಸಹೋದರರಿಬ್ಬರ ಅಪೂರ್ವ ಮಿಲನ, 74 ವರ್ಷಗಳ ಸುದೀರ್ಘ ಕಾಲದ ಬಳಿಕ ಒಂದಾದ ಸಹೋದರರು

ಇಡೀ ಜೀವನ ಒಡಹುಟ್ಟಿದವರ ನೆನಪಲ್ಲೇ ಬದುಕು ಸವೆಸಿದ ಮೊಹಮ್ಮದ್ ಸಿದ್ದಿಕಿ ತನ್ನ ಸಹೋದರ ಮೊಹಮ್ಮದ್ ಹಬೀಬ್ ಅಕಾ ಛೀಲಾ ಅವರನ್ನು 1947 ರ ವಿಭಜನೆ ಬಳಿಕ ಮಂಗಳವಾರ ಭೇಟಿಯಾದರು‌.

ಪಾಕಿಸ್ತಾನದ ಗುರುದ್ವಾರ ಕರ್ತಾರಪುರ ಸಾಹಿಬ್, ಈ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು.

ಕುಟುಂಬಸ್ಥರು ನೆರೆದವರ ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿ ತುಳುಕುತಿತ್ತು. ಪರಸ್ಪರ ತಬ್ಬಿಕೊಂಡು 75 ವರ್ಷದ ಅಗಲಿಕೆ ಅಂತ್ಯಗೊಳಿಸಿದ ಸಹೋದರರು, ಸೋದರರ ಪೈಕಿ ಮೊಹಮ್ಮದ್ ಸಿದ್ದಿಕಿ ಪಾಕಿಸ್ತಾನದ ಫೈಸ್ಲಾಬಾದ್ ನಿವಾಸಿ, ಮೊಹಮ್ಮದ್ ಹಬೀಬ್ ಅವರು ಭಾರತದ ಪಂಜಾಬ್ ನಿವಾಸಿ.

ಸಾಮಾಜಿಕ ಜಾಲತಾಣದಲ್ಲಿ ಕುಟುಂಬಸ್ಥರ ಪರಿಚಯವಾಗಿ ನಂತರ ಸೋದರರ ಅಪೂರ್ವ ಮಿಲನಕ್ಕೆ ವ್ಯವಸ್ಥೆ ಆಯಿತು. ಹಬೀಬ್ ಅವರು ಅವಿವಾಹಿತರಾಗಿಯೇ ಜೀವನ ಸವೆಸಿದ್ದಾರೆ. ಒಂಟಿ ಜೀವನ ಸಾಗಿಸುತ್ತಿದ್ದ ಹಬೀಬ್ ಅವರು ಕೊನೆಯುಸಿರೆಳೆದ ತಾಯಿಯ ಬಗ್ಗೆ ಸಹೋದರನಿಗೆ ಹೇಳಿ ಕಣ್ಣೀರಿಟ್ಟಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಹೋದರರ ಭೇಟಿಯ ಖುಷಿ ಕಂಡು ಖುಷಿಯಿಂದ ಮನೆಯಲ್ಲೇ ಆನಂದ ಭಾಷ್ಪ ಸುರಿಸಿದ ಮಂದಿ ಎಷ್ಟೋ.