ನಿವೇದಿತಾ ಗೌಡ ಬಟ್ಟೆ ಬಿಚ್ಚಿ ಆವಾಂತರ : ಏನಿದು ಹೊಸ ಅವತಾರ ಎಂದ ನೆಟ್ಟಿಗರು

ರ್ಯಾಪರ್ ಚಂದನ್ ಶೆಟ್ಟಿ ಹೆಸರು ಯಾರೂ ಕೇಳದೇ ಇರೋಕೆ ಸಾಧ್ಯವಿಲ್ಲ. ಚಂದನ್ ಶೆಟ್ಟಿಯ ಹಾಡುಗಳು ಸದಾ ಟ್ರೆಂಡ್ ನಲ್ಲಿದೆ. ಅಷ್ಟು ಮಾತ್ರವಲ್ಲ ಚಂದನ್ ಜೊತೆ ಅವರ ಪತ್ನಿ ನಿವೇದಿತಾ ಗೌಡ ಕೂಡ ಇನ್ಸ್ಟಾಗ್ರಾಂ ವೀಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ತನ್ನ ತಾಯಿ ಜೊತೆ ಇತ್ತೀಚಿಗೆ ತನ್ನ ಅಜ್ಜಿ ಜೊತೆಗೆ ಕೂಡಾ ರೀಲ್ಸ್ ಮಾಡಿದ್ದರು. ಇದೀಗ ಇವರ ಹೊಸ ರೀಲ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಸೆಲೆಬ್ರಿಟಿ ಆಗಿ ಈ ರೀತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರೋದು ಎಷ್ಟು ಸರಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ರೀತಿಯ ವೀಡಿಯೋ ಈಗಾಗಲೇ ಫಾರಿನ್ ಟಿಕ್ ಟಾಕರ್ಸ್ ಈ ರೀತಿಯ ಪ್ರ್ಯಾಂಕ್ ವೀಡಿಯೋ ತನ್ನ ಗಂಡನ ಮುಂದೆ ಮಾಡಿದ್ದರು. ಈ ವೀಡಿಯೋಗಳು ತುಂಬಾನೇ ಮೆಚ್ಚುಗೆ ಪಡೆದಿತ್ತು. ಈ ವೀಡಿಯೋ ತಮಾಷೆಗೆ ಮಾಡುವುದಾದರೂ, ಇದರಲ್ಲಿ ತನ್ನ ಗಂಡ ತನ್ನನ್ನು ಎಷ್ಟು ಪ್ರೀತಿ ಮಾಡ್ತಾನೆ ಅನ್ನೋದನ್ನು ಕೂಡಾ ತಿಳಿಸುತ್ತೆ. ಹೌದು ಅಂತಹುದೇ ಒಂದು ವೀಡಿಯೋ ಈಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿಯ ಮಾಡಿದ್ದಾರೆ.

ಅಷ್ಟಕ್ಕೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೀಡಿಯೋದಲ್ಲಿ ಇರೋದಾದರೂ ಏನು ?

ನಿವೇದಿತಾ ಗೌಡ ಅವರು ಈ ವೀಡಿಯೋದಲ್ಲಿ ಚಂದನ್ ಶೆಟ್ಟಿಯನ್ನು ಪ್ರ್ಯಾಂಕ್ ಮಾಡಲು ಹೊರಟಿದ್ದಾರೆ. ಚಂದನ್ ಅವರು ಹಿಂದುಗಡೆ ಕುಳಿತುಕೊಂಡು ಏನೋ ಕೆಲಸ ಮಾಡುತ್ತಾ ಇರುತ್ತಾರೆ. ನಿವೇದಿತಾ ಗೌಡ ಕ್ಯಾಮೆರಾ ಮುಂದೆ ಬರೀ ಬಾತ್ ಟವಲ್ ನಲ್ಲಿ ಡ್ಯಾನ್ಸ್ ಮಾಡುತ್ತಾರೆ. ತಕ್ಷಣವೇ ಟವಲ್ ಬಿಚ್ಚುತ್ತಾರೆ. ತಕ್ಷಣವೇ ಚಂದನ್ ಅವರು ಎದ್ದು ಅವರನ್ನು ಹಿಡಿದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ನಿವೇದಿತಾ ಗೌಡ ಅವರು ಒಳಗಡೆ ಮಿನಿಡ್ರೆಸ್ ಹಾಕಿದ್ದಾರೆ. ಇದು ಚಂದನ್ ಗೆ ಆಮೇಲೆ ಅರಿವಿಗೆ ಬರುತ್ತದೆ.

ಈ ಬಗ್ಗೆ ಟ್ರೋಲರ್ಸ್ ಟ್ರೋಲ್ ಮಾಡಲು ಶುರುಮಾಡಿಕೊಂಡಿದ್ದಾರೆ.