ಗುಪ್ತಾಂಗದಲ್ಲಿ ಚಿನ್ನ ಸಾಗಣೆ : ಕಸ್ಟಮ್ಸ್ ಅಧಿಕಾರಿಗಳಿಂದ ಮೂವರು ಮಹಿಳೆಯರ ಮೇಲೆ ಪ್ರಕರಣ ದಾಖಲು

ಹೈದರಾಬಾದ್ : ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಳ ಉಡುಪು ಮತ್ತು ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ಮಹಿಳಾ ಪ್ರಯಾಣಿಕರು 1.48 ಕೆಜಿ ತೂಕದ 72.80 ಲಕ್ಷ ಮೌಲ್ಯದ ಚಿನ್ನವನ್ನು ತಮ್ಮ ಒಳುಉಡುಪು ಹಾಗೂ ಗುಪ್ತಾಂಗದಲ್ಲಿ ಇಟ್ಟುಕೊಂಡು ಆರ್ ಜಿಐಎ ವಿಮಾನ ನಿಲ್ದಾಣದಲ್ಲಿ ಸಾಗಿಸಲು ಪ್ರಯತ್ನ ಪಟ್ಟಾಗ ತಪಾಸಣೆ ಸಂದರ್ಭದಲ್ಲಿ ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ. ಮಹಿಳೆಯರ ಬಳಿ ಇದ್ದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಮಹಿಳೆಯರು ಬೇರೆ ಬೇರೆ ವಿಮಾನಗಳಲ್ಲಿ ದುಬೈನಿಂದ ಹೈದರಾಬಾದ್ ಗೆ ಬಂದಿದ್ದಾರೆ. ಇಬ್ಬರು ಇವರಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮಾಡಿ ಅದನ್ನು ಒಳುಉಡುಪಲ್ಲಿ ಇಟ್ಟುಕೊಂಡಿದ್ದಾರೆ, ಆದರೆ ಇನ್ನೊಬ್ಬ ಮಹಿಳೆ ಗುಪ್ತಾಂಗದೊಳಗೆ ಬಚ್ಚಿಟ್ಟುಕೊಂಡಿದ್ದಾಳೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದೆ. ಅಧಿಕಾರಿಗಳು ಮೂವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.