Mallika

ಡಿಜಿಟಲ್‌ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಮಲ್ಲಿಕಾ ಪುತ್ರನ್‌- ಕನ್ನಡ ಸುದ್ದಿಜಾಲ.ಕಾಂ ತಾಣದ ಸುದ್ದಿ ಸಂಪಾದಕರು.

ಕಾಪು : ಫ್ಲೈ ಓವರ್ ನಲ್ಲಿ ಅಡಿಕೆ ಸಾಗಾಟದ ಟೆಂಪೋ ಟಯರ್ ಸ್ಪೋಟ

ಕಾಪು : ಅಡಿಕೆ ಸಾಗಾಟದ ಟೆಂಪೋವೊಂದು ಟಯರ್ ಸಿಡಿದು ಉರುಳಿಬಿದ್ದ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ‌ 66 ರ ಫ್ಲೈ ಓವರ್ ನಲ್ಲಿ ಬುಧವಾರ ಬೆಳಿ 8 ಗಂಟೆಗೆ ನಡೆದಿದೆ. ಈ ಅಪಘಾತದಿಂದ ಟೆಂಪೋದಲ್ಲಿದ್ದ ಚಾಲಕ ನಿರ್ವಾಹಕರಿಗೆ ಯಾವುದೇ ಗಾಯವಾಗಿಲ್ಲ‌ ಎಂದು ತಿಳಿದು ಬಂದಿದೆ. ಸಿದ್ದಾಪುರದಿಂದ ಮಂಗಳೂರಿಗೆ ಅಡಿಕೆ ಸಾಗಾಟ ಮಾಡುತ್ತಿದ್ದ ಟೆಂಪೋ ಟಯರ್ ಮಾರ್ಗ ಮಧ್ಯೆ ಒಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಫ್ಲೈ ಓವರ್ ನಲ್ಲಿ ಪಲ್ಟಿಯಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಈ […]

ಕಾಪು : ಫ್ಲೈ ಓವರ್ ನಲ್ಲಿ ಅಡಿಕೆ ಸಾಗಾಟದ ಟೆಂಪೋ ಟಯರ್ ಸ್ಪೋಟ Read More »

ಮೂರ್ಛೆ ರೋಗದಿಂದ ಪತಿಯ ಸಾವು ಎಂದು ಕಥೆ ಕಟ್ಟಿದ ಖತರ್ನಾಕ್ ಪತ್ನಿಯ ಬಂಧನ : ಕಾರಣ ಕಂಡು ಹಿಡಿದ ಪೊಲೀಸರು

ದೊಡ್ಡಬಳ್ಳಾಪುರ : ಕರೇನಹಳ್ಳಿಯಲ್ಲಿ ನಡೆದ ಕೊಲೆ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ. ಪ್ರಿಯಕರನಿಗಾಗಿ ಪತ್ನಿ ಪತಿಯ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತನಿಖೆ ಸಂದರ್ಭದಲ್ಲಿ ಹೇಳಿದ್ದಾರೆ. ಪತಿಯನ್ನು ಕೊಲೆ ಮಾಡಿ ಆತ ಮೂರ್ಛೆ ರೋಗದಿಂದ ಸಾವನ್ನಪ್ಪಿರುವುದಾಗಿ ನಂಬಿಸಿದ್ದ ಈ ಖತರ್ನಾಕ್ ಪತ್ನಿಯನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ನಗರ ನಿವಾಸಿ ರಾಘವೇಂದ್ರ ( 40) ಕೊಲೆಯಾದ ವ್ಯಕ್ತಿ. ಮಕ್ಕಳ ಎದುರಲ್ಲೇ ಕೊಲೆ ಮಾಡಿದ ಪತ್ನಿ ಶೈಲಜಾಗೆ ಆಕೆಯ ತಾಯಿ ಮತ್ತು ಪ್ರಿಯಕರ ಸಾಥ್ ನೀಡಿದ್ದಾರೆ. ಮಗಳ ಕೊಲೆ ಸಂಚಿಗೆ ಶೈಲಜಾ

ಮೂರ್ಛೆ ರೋಗದಿಂದ ಪತಿಯ ಸಾವು ಎಂದು ಕಥೆ ಕಟ್ಟಿದ ಖತರ್ನಾಕ್ ಪತ್ನಿಯ ಬಂಧನ : ಕಾರಣ ಕಂಡು ಹಿಡಿದ ಪೊಲೀಸರು Read More »

ಮಂಗಳೂರು : ಎವರೆಸ್ಟ್ ಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, 20 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ

ಮಂಗಳೂರು : ಎವರೆಸ್ಟ್ ಸೀ ಫುಡ್ಸ್ ಪ್ರೈ ಲಿಮಿಟೆಡ್ ಎಂಬ ಘಟಕದಲ್ಲಿ ಅಮೋನಿಯಂ ಸೋರಿಕೆ ಉಂಟಾಗಿ, 20 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಫ್ಯಾಕ್ಟರಿಯಲ್ಲಿದ್ದ ಎಲ್ಲಾ ನೌಕರರನ್ನು ಹೊರಗೆ ಕಳುಹಿಸಲಾಗಿದೆ. ಈ ಘಟನೆ ಹನ್ನೊಂದು ಗಂಟೆ ಸುಮಾರಿಗೆ ನಡೆದಿದೆ. ಒಟ್ಟು 80 ಜನ ಕಾರ್ಮಿಕರು ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯಲ್ಲಿ 26 ಜನ ಸಿಬ್ಬಂದಿಗಳು ಅಸ್ವಸ್ಥರಾಗಿದ್ದು, ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. 16 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 10 ಜನ ಚಿಕಿತ್ಸೆ

ಮಂಗಳೂರು : ಎವರೆಸ್ಟ್ ಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, 20 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ Read More »

ಕೆಎಂಎಫ್ ನಲ್ಲಿ ಉದ್ಯೋಗವಕಾಶ : 460 ವಿವಿಧ ಹುದ್ದೆಗಳ ಭರ್ತಿ – ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಕೆಎಂಎಫ್ ನಲ್ಲಿ ಉದ್ಯೋಗವಕಾಶ ಸೃಷ್ಟಿಸಲಿದ್ದು, ಮಾರ್ಚ್ ನೊಳಗೆ 460 ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರ ಹಾಲು ಶಿಥಲೀಕರಣ ಘಟಕ ಉದ್ಘಾಟಿಸಿ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಭಾನ್ವಿತ ಯುವಕರು, ಉದ್ಯೋಗದಿಂದ ವಂಚಿತರಾದವರಿಗೆ ಉದ್ಯೋಗವಕಾಶ ಕಲ್ಪಿಸಿ ಕೊಡಲು ಕೆಎಂಎಫ್ ನಿರ್ಧರಿಸಿದೆ. 460 ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ರೈತರಿಗಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ

ಕೆಎಂಎಫ್ ನಲ್ಲಿ ಉದ್ಯೋಗವಕಾಶ : 460 ವಿವಿಧ ಹುದ್ದೆಗಳ ಭರ್ತಿ – ಬಾಲಚಂದ್ರ ಜಾರಕಿಹೊಳಿ Read More »

ಕೊರಗಜ್ಜನ ವೇಷ ಧರಿಸಿ ಕುಣಿದ ಪ್ರಕರಣ, ಇಬ್ಬರ ಬಂಧನ – ಸುದ್ದಿಜಾಲ ನ್ಯೂಸ್

ವಿಟ್ಲ : ಸಾಲೆತ್ತೂರು ಸಮೀಪದ ಮುಸ್ಲಿಂ ಸಮುದಾಯದ ಮನೆಯೊಂದರ ಮದುವೆ ಸಮಾರಂಭದಲ್ಲಿ ಮದುಮಗ ಕೊರಗಜ್ಜನ ಮಾದರಿಯ ವೇಷ ಧರಿಸಿ ಕುಣಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿನಾ ಮಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್ ಮುಸ್ತಾಬ್ ( 28 ವರ್ಷ) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯಿದಿನ್ ಮನೀಶ್ ( 19 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.

ಕೊರಗಜ್ಜನ ವೇಷ ಧರಿಸಿ ಕುಣಿದ ಪ್ರಕರಣ, ಇಬ್ಬರ ಬಂಧನ – ಸುದ್ದಿಜಾಲ ನ್ಯೂಸ್ Read More »

CM clarifies

ಸಿ ಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ‌. ನಾನು ಆರೋಗ್ಯವಾಗಿದ್ದೇನೆ‌ ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ‌ ‌ನಾನು ಇಂದು ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್ – 19 ಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ನನ್ನ ಆರೋಗ್ಯ ಚೆನ್ನಾಗಿದೆ. ನಾನು ಹೋಮ್ ಕ್ವಾರಂಟೈನ್ ನಲ್ಲಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಐಸೋಲೇಟ್ ಆಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಿಎಂ ತಿಳಿಸಿದ್ದಾರೆ.

ಸಿ ಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್ Read More »

ಅಸ್ವಾಭಾವಿಕ ಲೈಂಗಿಕತೆಗಾಗಿ ಪತ್ನಿಯರ ಅದಲು ಬದಲು : ಪೊಲೀಸರಿಂದ ಮಾಹಿತಿ ಬಹಿರಂಗ- ಸುದ್ದಿಜಾಲ ನ್ಯೂಸ್

ಕೊಟ್ಟಾಯಂ : ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಣಾಚಲ ಪಟ್ಟಣದ ಪೊಲೀಸರು ಲೈಂಗಿಕ ಚಟುವಟಿಕೆಗಳಿಗಾಗಿ ಪಾಲುದಾರರನ್ನು ವಿನಿಮಯ ಮಾಡಿಕೊಳ್ಳುವ ದಂಧೆಯ ಭಾಗವಾಗಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಇತರ ಆರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ‌. ಈ ದಂಧೆಯು ಫೇಸ್ಬುಕ್ ಮತ್ತು ಟೆಲಿಗ್ರಾಂ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತಿತ್ತು‌ ಎನ್ನಲಾಗಿದೆ. ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇಂತಹ ಚಟುವಟಿಕೆಗಳಿಗಾಗಿ ತನ್ನ ಪತಿ ತನ್ನನ್ನು ತನ್ನ ಆನ್ಲೈನ್ ಮೂಲಕ ಸ್ನೇಹಿತರಿಗೆ ಪ್ರಚೋದನೆ ಮಾಡುತ್ತಿದ್ದ ಎಂದು ಆರೋಪಿಸಿದ್ದಾಳೆ.

ಅಸ್ವಾಭಾವಿಕ ಲೈಂಗಿಕತೆಗಾಗಿ ಪತ್ನಿಯರ ಅದಲು ಬದಲು : ಪೊಲೀಸರಿಂದ ಮಾಹಿತಿ ಬಹಿರಂಗ- ಸುದ್ದಿಜಾಲ ನ್ಯೂಸ್ Read More »

ಪರವಾನಿಗೆ ಇಲ್ಲದೆ ವಾಕಿಟಾಕಿ ಬಳಸಿದ ಮ್ಯಾನ್ಮಾರ್ ನ ಉಚ್ಛಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ ಶಿಕ್ಷೆ ಪ್ರಮಾಣ ವಿಧಿಸಿ ಕೋರ್ಟ್ – ಸುದ್ದಿಜಾಲ ನ್ಯೂಸ್

ಬ್ಯಾಂಕಾಕ್ : ಮ್ಯಾನ್ಮಾರ್ ನ ಉಚ್ಛಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರವಾನಗಿ ಇಲ್ಲದೇ ವಾಕಿಟಾಕಿ ಬಳಕೆ ಸೇರಿ ಹಲವು ಆರೋಪಗಳ ಸಂಬಂಧ ಅವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಚಾರಣೆಯ ಕುರಿತು ತಿಳಿದಿರುವ ಮೂಲಗಳು ಹೇಳಿದೆ. ನೊಬೆಲ್ ಪ್ರಶಯ ವಿಜೇತೆ 76 ವರ್ಷದ ಸೂಕಿ ಮೇಲಿನ ಸುಮಾರು 12 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಗರಿಷ್ಠ 100 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು

ಪರವಾನಿಗೆ ಇಲ್ಲದೆ ವಾಕಿಟಾಕಿ ಬಳಸಿದ ಮ್ಯಾನ್ಮಾರ್ ನ ಉಚ್ಛಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ ಶಿಕ್ಷೆ ಪ್ರಮಾಣ ವಿಧಿಸಿ ಕೋರ್ಟ್ – ಸುದ್ದಿಜಾಲ ನ್ಯೂಸ್ Read More »

ಸೋಷಿಯಲ್ ಮೀಡಿಯಾ ಬಳಕೆದಾರರೇ ಇತ್ತ ಗಮನಿಸಿ, ಕೇಂದ್ರದಿಂದ ಮಹತ್ವದ ಘೋಷಣೆ: ಹಲವರ ಖಾತೆ ಬ್ಯಾನ್

ನವದೆಹಲಿ : ಕೇಂದ್ರಸರಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಮತ್ತು ಸುಳ್ಳು ಸಂದೇಶಗಳನ್ನು ಹರಡುವ ಸೋಷಿಯಲ್ ಮೀಡಿಯಾಗಳನ್ನು ನಿಷೇಧಿಸಲು ಪ್ರಾರಂಭಿಸಿದೆ. ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು, ‘ ‘ಟ್ವಿಟ್ಟರ್, ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ‘ ನಕಲಿ ಮತ್ತು ಪ್ರಚೋದನಕಾರಿ’ ವಿಷಯವನ್ನು ಪೋಸ್ಟ್ ಮಾಡಿದ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರಕಾರ ನಿರ್ಬಂಧಿಸಿದೆ’ ಎಂದು ಶನಿವಾರ ಹೇಳಿದ್ದಾರೆ. ಹಾಗೂ ಇಂತಹ ಖಾತೆಗಳ ನಿರ್ವಾಹಕರನ್ನು ಶೀಘ್ರವೇ ಗುರುತಿಸಲಾಗುವುದು ಎಂದು ಹೇಳಿದ್ದಾರೆ. ದ್ವೇಷದ ಪೋಸ್ಟ್ ನ

ಸೋಷಿಯಲ್ ಮೀಡಿಯಾ ಬಳಕೆದಾರರೇ ಇತ್ತ ಗಮನಿಸಿ, ಕೇಂದ್ರದಿಂದ ಮಹತ್ವದ ಘೋಷಣೆ: ಹಲವರ ಖಾತೆ ಬ್ಯಾನ್ Read More »

ಹಿರಿಯ ಸಾಹಿತಿ ಫ್ರೊ. ಚಂದ್ರಶೇಖರ ಪಾಟೀಲ ನಿಧನ – ಸುದ್ದಿಜಾಲ ನ್ಯೂಸ್

ಬೆಂಗಳೂರು : ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಫ್ರೊ.ಚಂದ್ರಶೇಖರ ಪಾಟೀಲ ( ಚಂಪಾ) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಿಂದ ಗುರುತಿಸಲ್ಪಡುವ ಚಂದ್ರಶೇಖರ ಪಾಟೀಲರು ನಿಧನರಾಗಿದ್ದಾರೆ. ಇಂದು ಸೋಮವಾರ ಮುಂಜಾನೆ 6.30ರ ಸುಮಾರಿಗೆ ಅವರು ನಿಧನರಾಗಿರುವುದಾಗಿ ತಿಳಿದು ಬಂದಿದೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೋಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪಾರ್ಥೀವ ಶರೀರವನ್ನು ಯಲಚೇನಹಳ್ಳಿ

ಹಿರಿಯ ಸಾಹಿತಿ ಫ್ರೊ. ಚಂದ್ರಶೇಖರ ಪಾಟೀಲ ನಿಧನ – ಸುದ್ದಿಜಾಲ ನ್ಯೂಸ್ Read More »