ಸೋಷಿಯಲ್ ಮೀಡಿಯಾ ಬಳಕೆದಾರರೇ ಇತ್ತ ಗಮನಿಸಿ, ಕೇಂದ್ರದಿಂದ ಮಹತ್ವದ ಘೋಷಣೆ: ಹಲವರ ಖಾತೆ ಬ್ಯಾನ್


ನವದೆಹಲಿ : ಕೇಂದ್ರಸರಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಮತ್ತು ಸುಳ್ಳು ಸಂದೇಶಗಳನ್ನು ಹರಡುವ ಸೋಷಿಯಲ್ ಮೀಡಿಯಾಗಳನ್ನು ನಿಷೇಧಿಸಲು ಪ್ರಾರಂಭಿಸಿದೆ.

ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು, ‘ ‘ಟ್ವಿಟ್ಟರ್, ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ‘ ನಕಲಿ ಮತ್ತು ಪ್ರಚೋದನಕಾರಿ’ ವಿಷಯವನ್ನು ಪೋಸ್ಟ್ ಮಾಡಿದ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರಕಾರ ನಿರ್ಬಂಧಿಸಿದೆ’ ಎಂದು ಶನಿವಾರ ಹೇಳಿದ್ದಾರೆ.

ಹಾಗೂ ಇಂತಹ ಖಾತೆಗಳ ನಿರ್ವಾಹಕರನ್ನು ಶೀಘ್ರವೇ ಗುರುತಿಸಲಾಗುವುದು ಎಂದು ಹೇಳಿದ್ದಾರೆ.

ದ್ವೇಷದ ಪೋಸ್ಟ್ ನ ವೇಳೆ ವ್ಯಾಪಕವಾದ ಶಿಸ್ತುಕ್ರಮದ ಮಧ್ಯೆ, ಕ್ಯಾಬಿನೆಟ್ ಬ್ರೀಫಿಂಗ್ ನ ನಕಲಿ ವೀಡಿಯೋಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ವಿಷಯದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.