Mallika

ಡಿಜಿಟಲ್‌ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಮಲ್ಲಿಕಾ ಪುತ್ರನ್‌- ಕನ್ನಡ ಸುದ್ದಿಜಾಲ.ಕಾಂ ತಾಣದ ಸುದ್ದಿ ಸಂಪಾದಕರು.

ದಕ್ಷಿಣ ಕನ್ನಡದಲ್ಲಿ ಕೊರೋನಾ ಹೆಚ್ಚಳದಿಂದಾಗಿ ವಾರಾಂತ್ಯ ದೇವಾಲಯಗಳು ಬಂದ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ – 19 ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜಿಲ್ಲೆಯ ದೇವಸ್ಥಾನಗಳಿಗೆ ಆಗಸ್ಟ್ 15 ರವರೆಗೆ ಕೆಲವು ನಿರ್ಬಂಧಗಳನ್ನು ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ದೇವಸ್ಥಾನವು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಬುಧವಾರ ಆದೇಶ ಹೊರಡಿಸಿದ್ದಾರೆ. ತೀರ್ಥ ಪ್ರಸಾದ, ಅನ್ನಸಂತರ್ಪಣೆ ಭಕ್ತರಿಗೆ ಲಭ್ಯವಿರುವುದಿಲ್ಲ. ಸಾಮಾಜಿಕ ಅಂತರ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಭಕ್ತರು ಅನುಸರಿಸಬೇಕು. […]

ದಕ್ಷಿಣ ಕನ್ನಡದಲ್ಲಿ ಕೊರೋನಾ ಹೆಚ್ಚಳದಿಂದಾಗಿ ವಾರಾಂತ್ಯ ದೇವಾಲಯಗಳು ಬಂದ್ Read More »

ಅಯೋಧ್ಯೆ ರಾಮ ದೇಗುಲ 2023ರ ಅಂತ್ಯಕ್ಕೆ ದರ್ಶನಕ್ಕೆ ಮುಕ್ತ

ಅಯೋಧ್ಯೆಯ ರಾಮ ದೇಗುಲವು 2023 ರ ಅಂತ್ಯದ ವೇಳೆಗೆ ಭಕ್ತರ ದರ್ಶನಕ್ಕೆ ಸಿಗಲಿದೆ ಎಂದು ರಾಮ ದೇಗುಲ ಟ್ರಸ್ಟ್ ನ ಮೂಲಗಳು ತಿಳಿಸಿವೆ. ದೇಗುಲದ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಹಾಗೂ 2023 ರ ವೇಳೆಗೆ ಗರ್ಭಗುಡಿಯ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಭಕ್ತರು ದರ್ಶನ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಆದರೆ ಪೂರ್ಣ ದೇಗುಲದ ನಿರ್ಮಾಣ ಕಾಮಗಾರಿಯು ಸಂಪೂರ್ಣವಾಗಿ 2025 ರ ವೇಳೆಗಷ್ಟೇ ಪೂರ್ಣಗೊಳ್ಳಲಿದೆ.ದೇಗುಲವು 360 ಅಡಿ ಉದ್ದ, 325 ಅಡಿ ಅಗಲವಿದ್ದು, ಪ್ರತಿಯೊಂದು ಮಹಡಿಯ ಎತ್ತರವು

ಅಯೋಧ್ಯೆ ರಾಮ ದೇಗುಲ 2023ರ ಅಂತ್ಯಕ್ಕೆ ದರ್ಶನಕ್ಕೆ ಮುಕ್ತ Read More »

ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ರವಿ ದಹಿಯಾ

ಟೋಕಿಯೋ ಒಲಂಪಿಕ್ಸ್ ನಲ್ಲಿ 57 ಕೆಜಿ ಕುಸ್ತಿ ವಿಭಾಗದಲ್ಲಿ ಕಜಿಕಿಸ್ತಾನದ ನುರಿಸ್ಲಾಮ್ ಸನಾಯೇವ್ ರನ್ನು ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರವಿ ದಹಿಯಾ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ರವಿ ದಹಿಯಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಅರ್ಹತೆ ಪಡೆದ ಎರಡನೇ ಭಾರತೀಯ ಕುಸ್ತಿಪಟುವಾಗಿದ್ದಾರೆ. 2012 ರ ಲಂಡನ್ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಸುಶೀಲ್ ಕುಮಾರ್ ಆಗಿದ್ದಾರೆ.

ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ರವಿ ದಹಿಯಾ Read More »

29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನೂತನ ಸಂಪುಟ ರಚನೆಯಲ್ಲಿ ಮೊದಲಿಗೆ 29 ಸಚಿವರಿಗೆ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ವಿಧಿ ಬೊಧಿಸಿದರು. ಈ ಬಾರಿ 7 ಸಚಿವ ಸ್ಥಾನ ಬೆಂಗಳೂರು ನಗರಕ್ಕೆ ದೊರಕಿದೆ. ದಾವಣಗೆರೆ, ಕೋಲಾರ, ಚಿಕ್ಕಮಗಳೂರು, ಯಾದಗಿರಿ, ಬಳ್ಳಾರಿ, ಮೈಸೂರು, ರಾಮನಗರ, ಕೊಡಗು, ರಾಯಚೂರು, ವಿಜಯಪುರ, ಬಳ್ಳಾರಿ ,ಹಾಸನ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿಲ್ಲ. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ, ಆರ್. ಅಶೋಕ್ – ಪದ್ಮನಾಭ

29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ Read More »

ಝೀರೋ ಟ್ರಾಫಿಕ್ ನಲ್ಲಿ ಪ್ರಮಾಣ ವಚನಕ್ಕೆ ಬಂದ ಶಶಿಕಲಾ ಜೊಲ್ಲೆ

ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ದೊರಕಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಡವಾಗಿ ಬಂದ ಜೊಲ್ಲೆ ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್ ನಲ್ಲಿ ರಾಜಭವನದವರೆಗೆ ಆಗಮಿಸಿದರು. ಸಂಚಾರ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಅಂಗನವಾಡಿ ಮೊಟ್ಟೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಆರೋಪ ಶಶಿಕಲಾ ಜೊಲ್ಲೆ ಮೇಲೆ ಕೇಳಿ ಬಂದಿತ್ತು. ಈ ಕಾರಣದಿಂದಾಗಿ ಸಚಿವ ಸ್ಥಾನ ತಪ್ಪುತ್ತದೆ ಎಂದು ಕೇಳಿಬಂದಿತ್ತು.ಆದರೆ ಕೊನೆಯ ಕ್ಷಣದವರೆಗೂ ಲಾಬಿ ನಡೆಸಿದ ಶಾಸಕಿ ಜೊಲ್ಲೆ ಸಚಿವ

ಝೀರೋ ಟ್ರಾಫಿಕ್ ನಲ್ಲಿ ಪ್ರಮಾಣ ವಚನಕ್ಕೆ ಬಂದ ಶಶಿಕಲಾ ಜೊಲ್ಲೆ Read More »

ರಾಜಭವನದ ಸುತ್ತ ಸಂಭ್ರಮ,ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರಿಂದ ಆಕ್ರೋಶ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸಚಿವರಾಗಿ ಸೇರಲಿರುವ ಶಾಸಕರ ಬೆಂಬಲಿಗರು ರಾಜಭವನದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಜೈಕಾರ ಹೇಳುತ್ತಾ ತಮ್ಮ ಸಂಭ್ರಮವನ್ನು ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮಧ್ಯಾಹ್ನ 2.15 ಕ್ಕೆ ರಾಜಭವನದಲ್ಲಿ 29 ಶಾಸಕರು ಸಚಿವರಾಗಿ ಪ್ರಮಾಣ ವಿಧಿ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ರಾಜಭವನದ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು

ರಾಜಭವನದ ಸುತ್ತ ಸಂಭ್ರಮ,ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರಿಂದ ಆಕ್ರೋಶ Read More »

ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ದೊರಕಿದ ಮೂರ‌ನೇ ಪದಕವಾಗಿದೆ. ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಇಂದು ನಡೆದ ಸೆಮಿಫೈನಲ್ ನಲ್ಲಿ 5-0 ಅಂತರದಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಬುಸೆನಾಜ್ ಅವರ ಆಕ್ರಮಣಕಾರಿ ಆಟಕ್ಕೆ ಸೋಲು ಒಪ್ಪಬೇಕಾಯಿತು. ಸೆಮಿಫೈನಲ್ಸ್ ಗೆ ಪ್ರವೇಶಿಸುವ ಮೂಲಕ ಚಿನ್ನದ ಪದಕಕ್ಕೆ ಗುರಿ ಇಟ್ಟ ಲವ್ಲಿನಾ ಈಗ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಯಿತೈ ಪಟುವಾಗಿದ್ದ 23 ವರ್ಷದ ಲವ್ಲಿನಾ

ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ Read More »

ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿ

ಪುತ್ತೂರು ನಗರದ ಹೊರವಲಯದ ಕಬಕ ಗ್ರಾ.ಪಂ.ವತಿಯಿಂದ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಭಾನುವಾರ ಸ್ವಾತಂತ್ರ್ಯ ರಥಕ್ಕೆ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ, ಸ್ವಾತಂತ್ರ್ಯೋತ್ಸವ ಆಚರಿಸದಂತೆ‌ ಸಾರ್ವಜನಿಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪಂಚಾಯತಿ ‌ಅಧ್ಯಕ್ಷಕರನ್ನು ಕೈಯಿಂದ ದೂಡಿ, ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿದ್ದಾರೆ. ಸ್ವಾತಂತ್ರ್ಯದ ಹಿನ್ನೆಲೆ ಮೆರವಣಿಗೆಗೆ ತಯಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಘೋಷಣೆಗಳು ಮೊಳಗಿದವು. ಎಸ್ ಡಿಪಿಐ

ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿ Read More »