ವಾಹನ ಸವಾರರೇ ಗಮನಿಸಿ, ನಿಮಗೊಂದು ಮುಖ್ಯವಾದ ಮಾಹಿತಿ, ವಾಹನ ತಪಾಸಣೆ ಯಾರು ಮಾಡಬಹುದು ? ಎಂಬಿತ್ಯಾದಿ ವಿವರ ನಿಮಗಾಗಿ

ವಾಹನ ತಪಾಸಣೆ ಮಾಡುವಾಗ ಪೊಲೀಸರು ಹಾಗೂ ಸವಾರರ ಮಧ್ಯೆ ಏನಾದರೊಂದು ಮಾತಿನ ಚಕಮಕಿ ನಡೆದೇ ನಡೆಯುತ್ತೆ. ಹಾಗೂ ಈ ವಾಹನ ತಪಾಸಣೆ ಮಾಡುವ ಕುರಿತು ಜನರು ಯಾವಾಗಲೂ ಆರೋಪ ಮಾಡುತ್ತಲೇ ಇರುತ್ತಾರೆ. ಈ ದಂಡ ಕಟ್ಟುವ ವಿಚಾರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ನಡೆದ ಎಷ್ಟೋ ಪ್ರಕರಣಗಳು ನಮ್ಮ ಮುಂದೆ ಇದೆ.

ಈಗ ನಾವು ಇಲ್ಲಿ ಯಾರು ವಾಹನಗಳ ತಪಾಸಣೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಕಾನ್ಸ್ ಟೇಬಲ್ ( ಪೇದೆ) ಗಳಿಗೆ ವಾಹನ ತಪಾಸಣೆ ಮಾಡುವ ಅಧಿಕಾರ ಇಲ್ಲ. ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮತ್ತು ಇತರ ಮೇಲಿನ ದರ್ಜೆ ಅಧಿಕಾರಿಗಳಿಗೆ ಮಾತ್ರ ವಾಹನ ತಪಾಸಣೆ ಮಾಡಿ ದಂಡ ಹಾಕುವ, ದಂಡವನ್ನು ಸ್ವೀಕಾರ ಮಾಡುವ ಅಧಿಕಾರವಿದೆ.

ಕಾನ್ಸ್ ಟೇಬಲ್ ಗಳು ದಂಡ ಹಾಕಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈ ಅಧಿಕಾರ ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕೆ ಈ ಅಧಿಕಾರ ಯಾರಿಗೂ ನೀಡಿಲ್ಲ. ಈ ರೀತಿಯ ಘಟನೆಗಳು ನಡೆದರೆ ಜನರು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು.

ವಾಹನ ತಪಾಸಣೆ ಯಾವಾಗ ಮಾಡಬೇಕು ?

ಪೀಕ್ ಅವರ್ ಹೊರತುಪಡಿಸಿ ಬೇರೆ ಸಮಯದಲ್ಲಿ ವಾಹನ ತಪಾಸಣೆ ಮಾಡಬೇಕು. ಬೆಳಗ್ಗೆ 10.30 ರಿಂದ 11.30 ಹಾಗೂ ಮಧ್ಯಾಹ್ನ 3 ರಿಂದ 5 ರ ತನಕ ತಪಾಸಣೆ ಮಾಡಬೇಕು. ಅಪಘಾತವಲಯಗಳಾಗಿದ್ದರೆ ಮಾತ್ರ ಪೂರ್ಣ ಪ್ರಮಾಣದ ತನಿಖೆ ಮಾಡಬೇಕು. ರಿಂಗ್ ರಸ್ತೆಯಲ್ಲಿ ವಾಹನಗಳ ವೇಗದ , ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಗಳನ್ನು ಮಾತ್ರ ನಡೆಸಬೇಕು. ವಿಮೆ, ಆರ್ ಸಿ ಬುಕ್, ಹೆಲ್ಮೆಟ್ ಇಲ್ಲ ಇಂತಹ ತಪಾಸಣೆಗಳನ್ನು ಅಲ್ಲಿ ಮಾಡುವಂತಿಲ್ಲ.