ಸಖತ್ ವೈರಲ್ ಆದ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವೀಡಿಯೋ : ನೆಟ್ಟಿಗರಿಂದ ಭರಪೂರ ಮೆಚ್ಚುಗೆ

ರಾಧಿಕಾ ಕುಮಾರಸ್ವಾಮಿ ಈಗ ಸಿನಿಲೋಕದಿಂದ ಸ್ವಲ್ಪ ದೂರನೇ ಇದ್ದಾರೆ. ಆದರೆ ಒಂದು ಕಾಲದಲ್ಲಿ ನಟಿಸಿದ ಎಲ್ಲಾ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿತ್ತು.

ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್ ಗಳನ್ನು ಕೊಡುತ್ತಾ ಇರುತ್ತಾರೆ. ಫೋಟೋಸ್ ವೀಡಿಯೋಗಳನ್ನು ಹಂಚುತ್ತಾರೆ.

ಕೆಲ ದಿನಗಳ ಹಿಂದೆ ವೀಡಿಯೋವೊಂದನ್ನು ಶೇರ್ ಮಾಡಿದ್ದರು. ಈ ವೀಡಿಯೋದಲ್ಲಿ ರಾಧಿಕಾ ಅವರ ಡ್ಯಾನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಪ್ಪು ಬಣ್ಣದ ಗೌನ್ ತೊಟ್ಟು ಹಿಂದಿಯ ‘ ಮೇರ ಯಾರ್ ‘ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ರಾಧಿಕಾ ಅವರು ಅಭಿನಯತ್ರಿ ಮಾತ್ರ ಅಲ್ಲ ಒಳ್ಳೆ ನೃತ್ಯಗಾರ್ತಿ ಕೂಡಾ ಹೌದು. ಡ್ಯಾನ್ಸ್ ನಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ ಇದೆ. ಹರೆಯದ ಹುಡುಗಿಯರು ನಾಚುವಂತೆ ಡ್ಯಾನ್ಸ್ ಮಾಡಿದ್ದಾರೆ ರಾಧಿಕಾ ಕುಮಾರಸ್ವಾಮಿ.