ಪುತ್ತೂರು : ಜನ್ಮ ನೀಡಿದ ತಾಯಿಯ ಮೇಲೆಯೇ ಮಗನಿಂದ ಅತ್ಯಾಚಾರ

ಜನ್ಮ ನೀಡಿದ ತಾಯಿಯ ಮೇಲೆಯೇ ಮಗ ಅತ್ಯಾಚಾರ ಮಾಡಿದ ಪೈಶಾಚಿಕ ಘಟನೆಯೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಜ.12 ರ ತಡರಾತ್ರಿ ನಡೆದಿದೆ.

ಜ.12 ರ ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ಎರಡು ಬಾರಿ ತಾಯಿಯ ತೀವ್ರ ವಿರೋಧದ ನಡುವೆಯೂ ಈ ಮಗ ಅಮಾನುಷ ವರ್ತನೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ತಾಯಿ ಇದರಿಂದ ತೀವ್ರ ಆಘಾತಕ್ಕೊಳಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅತ್ಯಾಚಾರಿ ಮಗನಿಗೆ ಮದುವೆಯಾಗಿದ್ದು, ಸೀಮಂತಕ್ಕೆಂದು ಹೋದ ಹೆಂಡತಿ ಮನೆಗೆ ಬಂದಿಲ್ಲ. ಈತನಿಗೆ ಅಂದಾಜು 35 ವರ್ಷ ಆಗಿರಬಹುದು.

ತಾಯಿ ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೃತ್ಯ ನಡೆದ ರಾತ್ರಿ ಜ‌ 12 ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ.

3 ಗಂಟೆ ನಸುಕಿನ ಸಮಯದಲ್ಲಿ ತಾಯಿ ಮಲಗಿದ್ದ ರೂಂ ಗೆ ಬಂದ ಆರೋಪಿ ಅತ್ಯಾಚಾರ ಮಾಡಿದ್ದಾನೆ. ತಾಯಿ ಈ ಸಂದರ್ಭ ಕಿರುಚಾಡಿ ತಳ್ಳಿ ಹಾಕಲು ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಆರೋಪಿಯು ತಾಯಿಯ ಬಾಯಿಗೆ ಬಟ್ಟೆ ತುರುಕಿ ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ್ದಾನೆ. ನಂತರ ಅತ್ಯಾಚಾರ ಮಾಡಿದ್ದಾನೆ. ನಂತರ ಬೆಳಿಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದು ಬಲವಂತದಿಂದ ಅವರನ್ನು ಎಳೆದುಕೊಂಡು ಹೋಗಿ ಮತ್ತೆ ಅತ್ಯಾಚಾರ ಮಾಡಿದ್ದಾನೆ.

ಇದರಿಂದ ತೀವ್ರ ಅಸ್ವಸ್ಥಗೊಂಡಿರುವ ಮಹಿಳೆ ಮಧ್ಯಾಹ್ನ 1 ಗಂಟೆಗೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ‌