ಸುಂದರಿಗಾಗಿ ಕೋಟಿ ಕೋಟಿ ಕಳೆದುಕೊಂಡ 73 ರ ವೃದ್ಧ

ಮುಂಬೈ : 73 ವರ್ಷದ ವೃದ್ಧನೋರ್ವನಿಗೆ ಸುಂದರಿ ಮಹಿಳೆಯೋರ್ವಳು ಮದುವೆಯಾಗುವ ಭರವಸೆ ನೀಡಿ, ಆತನ ವಿಶ್ವಾಸ ಗಳಿಸಿ 1.3 ಕೋಟಿ ರೂ. ಪಡೆದು ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮಲಾಡ್ ನ ಮಾಲ್ವಾನಿ ನಿವಾಸಿ ಜೆರೊನ್ ಡಿಸೋಜಾ ಅಂಧೇರಿ ಅವರಿಗೆ ಶಾಲಿನಿ ಎನ್ನುವ ಮಹಿಳೆಯ ಪರಿಚಯವಾಗಿದೆ. ಮದುವೆಯಾಗುತ್ತೇನೆ, ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾಳೆ. ನಂತರ 1 ಕೋಟಿಗಿಂತಲೂ ಹೆಚ್ಚು ಹಣ ಪಡೆದಿದ್ದಾಳೆ. ಅನಂತರ ಸಂಪರ್ಕಕ್ಕೆ ಸಿಗದೆ ಇದ್ದಾಗ, ಅನುಮಾನಗೊಂಡ ವ್ಯಕ್ತಿ ಹಣದೊಂದಿಗೆ ಆಕೆ ತನ್ನ ಹಳ್ಳಿಗೆ ಹೋಗಿ ಬೇರೊಬ್ಬನನ್ನು ಮದುವೆಯಾಗಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ಡಿಸೋಜಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.