ಶಿಕ್ಷಣ

ವಿದ್ಯಾರ್ಥಿಗಳೇ ಗಮನಿಸಿ : ಪಿಯುಸಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ – ಸುದ್ದಿಜಾಲ ನ್ಯೂಸ್

ಬೆಂಗಳೂರು : ಪಠ್ಯಕ್ರಮ ಪೂರ್ಣಗೊಳಿಸಲು ಸಮಯಾವಕಾಶ ಬೇಕಿರುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಒಂದು ತಿಂಗಳು ವಿಳಂಬವಾಗಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೊರೊನಾ ಕಾರಣದಿಂದಾಗಿ ಶೈಕ್ಷಣಿಕ ಅವಧಿ ಕಡಿತಗೊಂಡಿದೆ. ಇದರಿಂದಾಗಿ ಪಠ್ಯಕ್ರಮ ಪೂರ್ಣಗೊಳಿಸಲು ಸಮಯ ಬೇಕಿದ್ದು, ಪರೀಕ್ಷೆಯನ್ನು ಮುಂದೂಡುವ ಚಿಂತನೆ ‌ನಡೆಸಲಾಗಿದೆ. ಪ್ರತಿವರ್ಷ ಮಾರ್ಚ್ ವೇಳೆಗೆ ನಡೆಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಈ ಬಾರಿ ಮೇ- ಜೂನ್ ನಲ್ಲಿ ನಡೆಯುವ ಸಾಧ್ಯತೆ ಇದೆ‌. ವೃತ್ತಿಪರ ಕೋರ್ಸ್ ಗಳ […]

ವಿದ್ಯಾರ್ಥಿಗಳೇ ಗಮನಿಸಿ : ಪಿಯುಸಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ – ಸುದ್ದಿಜಾಲ ನ್ಯೂಸ್ Read More »

ಶಾಲೆಗಳಲ್ಲಿ ಭಗವದ್ಗೀತೆ ಪಠಣ : ಕೇಂದ್ರದಿಂದ ಗ್ರೀನ್ ಸಿಗ್ನಲ್ – ಸುದ್ದಿಜಾಲ ನ್ಯೂಸ್

ನವದೆಹಲಿ : ಸಿಬಿಎಸ್ ಇ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವಂತೆ ಭಗವದ್ಗೀತೆಯನ್ನು ರಾಜ್ಯ ಪಠ್ಯಕ್ರಮದಲ್ಲಿಯೂ ಅಳವಡಿಸಬಹುದು. ಇದಕ್ಕೆ ರಾಜ್ಯ ಸರಕಾರಗಳೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರಕಾರವು ಲೋಕಸಭೆಯಲ್ಲಿ ಹೇಳಿದೆ. ಈಗಾಗಲೇ ಸಿಬಿಎಸ್ ಇ 6,7 ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ಕಲಿಸಲಾಗುತ್ತದೆ. ಹೀಗಾಗಿ ಭಗವದ್ಗೀತೆ ಕಲಿಸಲು ರಾಜ್ಯ ಸರಕಾರಗಳು ಬಯಸಿದರೆ ಭಗವದ್ಗೀತೆ ಹಾಗೂ ಬೋಜ್ ಪುರಿ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಹುದು ಎಂದು ರಾಜ್ಯ ಶಿಕ್ಷಣ ಖಾತೆ ಸಚಿವೆ ಅನ್ನಪೂರ್ಣಾದೇವಿ ಹೇಳಿದ್ದಾರೆ. ಪ್ರಶ್ನೋತ್ತರ ಸಂದರ್ಭದಲ್ಲಿ

ಶಾಲೆಗಳಲ್ಲಿ ಭಗವದ್ಗೀತೆ ಪಠಣ : ಕೇಂದ್ರದಿಂದ ಗ್ರೀನ್ ಸಿಗ್ನಲ್ – ಸುದ್ದಿಜಾಲ ನ್ಯೂಸ್ Read More »

‘ವೀಡಿಯೋಗ್ರಾಫಿ’ ‘ ಫೋಟೋಗ್ರಾಫಿ’ಯಲ್ಲಿ ನಿಮಗೆ ಆಸಕ್ತಿ ಇದೆಯೇ ? ನಿಮಗಿದೆ ಇಲ್ಲಿ ಉಚಿತ ತರಬೇತಿ : ಈ ಕೂಡಲೇ ಅರ್ಜಿ ಸಲ್ಲಿಸಿ

ಹಾವೇರಿ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ 30 ದಿನಗಳ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ಈ ತರಬೇತಿ ಸ್ವ ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ತರಬೇತಿ ಸಮಯದಲ್ಲಿ ಊಟ ವಸತಿ ಉಚಿತವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ

‘ವೀಡಿಯೋಗ್ರಾಫಿ’ ‘ ಫೋಟೋಗ್ರಾಫಿ’ಯಲ್ಲಿ ನಿಮಗೆ ಆಸಕ್ತಿ ಇದೆಯೇ ? ನಿಮಗಿದೆ ಇಲ್ಲಿ ಉಚಿತ ತರಬೇತಿ : ಈ ಕೂಡಲೇ ಅರ್ಜಿ ಸಲ್ಲಿಸಿ Read More »

ಸರಕಾರಿ, ಅನುದಾನಿತ ಕಾಲೇಜ್ ಗಳಲ್ಲಿ ಪಿಯು ಉಪನ್ಯಾಸಕರಾಗಲು ಬಿಎಡ್ ಕಡ್ಡಾಯ

ಬೆಂಗಳೂರು : ರಾಜ್ಯದ ಸರಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಬಿಎಡ್ ಕಡ್ಡಾಯಗೊಳಿಸಲಾಗಿದೆ. 2008 ರ ಫೆಬ್ರವರಿ 4 ರ ನಂತರ ನೇಮಕಗೊಂಡ ಉಪನ್ಯಾಸಕರಿಗೆ ಬಿಎಡ್ ಪದವಿ ಕಡ್ಡಾಯಗೊಳಿಸಿ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. 2008 ರ ಫೆಬ್ರವರಿ 4 ಕ್ಕೆ ಮೊದಲು ನೇಮಕವಾಗಿ ಅನುದಾನಕ್ಕೆ ಒಳಪಟ್ಟ ಉಪನ್ಯಾಸಕರು ಬಿಎಡ್ ಪದವಿ ಪಡೆಯಲು ಷರತ್ತು ವಿಧಿಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ. 2008 ರ ಫೆ.4 ನಂತರ ನೇಮಕವಾದ ಉಪನ್ಯಾಸಕರಿಗೆ ಬಿಎಡ್

ಸರಕಾರಿ, ಅನುದಾನಿತ ಕಾಲೇಜ್ ಗಳಲ್ಲಿ ಪಿಯು ಉಪನ್ಯಾಸಕರಾಗಲು ಬಿಎಡ್ ಕಡ್ಡಾಯ Read More »

ಮುಂದಿನ ಶೈಕ್ಷಣಿಕ ವರ್ಷದಿಂದ ಅಂಗನವಾಡಿಯಲ್ಲಿ LKG-UKG ಆರಂಭ – ಸಚಿವ ಬಿ ಸಿ ನಾಗೇಶ್

ಮುಂದಿನ ಶೈಕ್ಷಣಿಕ ವರ್ಷದಿಂದ ಅಂಗನವಾಡಿಯಲ್ಲಿ ಎಲ್ ಕೆ ಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ ಬಿ ಸಿ ನಾಗೇಶ್. ಈ ಬಗ್ಗೆ ಅಲ್ಲಿರುವ ಸಿಬ್ಬಂದಿಗೆ ತರಬೇತಿ ನೀಡಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಹಂತ ಹಂತವಾಗಿ ಎನ್ ಇಪಿ ಜಾರಿ ಮಾಡಲಾಗುತ್ತದೆ. 26 ಪೊಸಿಶನ್ ಪೇಪರ್ ಸಲ್ಲಿಕೆಯಾಗುತ್ತಿದೆ. ತಜ್ಞರ ತಂಡ

ಮುಂದಿನ ಶೈಕ್ಷಣಿಕ ವರ್ಷದಿಂದ ಅಂಗನವಾಡಿಯಲ್ಲಿ LKG-UKG ಆರಂಭ – ಸಚಿವ ಬಿ ಸಿ ನಾಗೇಶ್ Read More »

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಟ್ಯಾಬ್ : ಸುದ್ದಿಜಾಲ ನ್ಯೂಸ್

ಹಾವೇರಿ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ‌ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸಹಾಯಧನ ಪಡೆಯಲು ಹಾಗೂ ಸಫಾಯಿ ಕರ್ಮಚಾರಿ ಮಕ್ಕಳಿಗೆ ಟ್ಯಾಬ್ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಫಾಯಿ ಕರ್ಮಚಾರಿ, ಪೌರಕಾರ್ಮಿಕರು ಹಾಗೂಮ್ಯಾನ್ಶಯಲ್ ಸ್ಕ್ಯಾವೆಂಜರ್ಸ್ ಗಳ ನೋಂದಾಯಿತ ಸಂಘ ಸಂಸ್ಥೆಗಳಿಗೆ ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರ ಖರೀದಿಸಲು ಶೇ.75 ರಷ್ಟು ಸಹಾಯಧನ ನೀಡಲು ಹಾಗೂ ಮಕ್ಕಳಿಗೆ ಆನ್ಲೈನ್ ಪಾಠ ಕೇಳಲು, ವಿದ್ಯಾಭ್ಯಾಸದ ( 8 ನೇ ತರಗತಿಯಿಂದ ಪಿಯುಸಿ, ಬಿಎ, ಬಿಕಾಂ, ಡಿಗ್ರಿ

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಟ್ಯಾಬ್ : ಸುದ್ದಿಜಾಲ ನ್ಯೂಸ್ Read More »

ವಿದ್ಯಾರ್ಥಿಗಳೇ ಗಮನಿಸಿ, ಈ ಬಾರಿಯ SSLC ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆ ಇಲ್ಲ – ಸುದ್ದಿಜಾಲ ನ್ಯೂಸ್

ಬೆಂಗಳೂರು : ಕೋವಿಡ್ 19 ಕಾರಣಕ್ಕೆ 2021 ನೇ ಸಾಲಿನ ಪರೀಕ್ಷೆಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈ ಬಿಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಪ್ರಥಮ ಭಾಷೆ ಹೊರತುಪಡಿಸಿ ಉಳಿದ ವಿಷಯಗಳಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರಥಮ ಭಾಷೆಗೆ ಮಾತ್ರ 125 ಅಂಕಗಳನ್ನು ನಿಗದಿಪಡಿಸಲಾಗಿದೆ. ‘ ತಜ್ಞರ ಹಾಗೂ ಶಿಕ್ಷಕರ ಅಭಿಪ್ರಾಯಗಳನ್ನು ಪಡೆದು ಬಹು ಆಯ್ಕೆಯ ಪ್ರಶ್ನೆಗಳನ್ನು

ವಿದ್ಯಾರ್ಥಿಗಳೇ ಗಮನಿಸಿ, ಈ ಬಾರಿಯ SSLC ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆ ಇಲ್ಲ – ಸುದ್ದಿಜಾಲ ನ್ಯೂಸ್ Read More »

ವಿದ್ಯಾರ್ಥಿಗಳೇ ಗಮನಿಸಿ : ಬಿಇಡಿ ಕೋರ್ಸ್ , ಮೂಲದಾಖಲಾತಿಗಳ‌ ಪರಿಶೀಲನೆ ಅವಧಿ ವಿಸ್ತರಣೆ- ಸುದ್ದಿಜಾಲ ನ್ಯೂಸ್

ಬೆಂಗಳೂರು : 2021-22 ನೇ ಸಾಲಿನ ಬಿ.ಇಡಿ ಕೋರ್ಸಿನ ದಾಖಲಾತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸರಕಾರಿ ಕೋಟಾದಲ್ಲಿ ಲಭ್ಯವಿರುವ ಸೀಟುಗಳ‌ ಹಂಚಿಕೆಗೆ ದಿನಾಂಕ 30-11-2021 ರಂದು ಅರ್ಹತಾ ಪಟ್ಟಿ ಪ್ರಕಟಿಸಿದೆ. ಬಳಿಕ, ಮೂಲ ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟಿಸಿತ್ತು. ಈಗ ಅಂತಿಮ ದಿನಾಂಕವನ್ನು ಡಿಸೆಂಬರ್ 14, 2021 ರವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿಇಡಿ ಕೋರ್ಸಿನ ದಾಖಲಾತಿಗೆ ಸರಕಾರಿ ಕೋಟಾದಡಿ ಲಭ್ಯವಿರುವಂತ ಸೀಟುಗಳ ಹಂಚಿಕೆಯ

ವಿದ್ಯಾರ್ಥಿಗಳೇ ಗಮನಿಸಿ : ಬಿಇಡಿ ಕೋರ್ಸ್ , ಮೂಲದಾಖಲಾತಿಗಳ‌ ಪರಿಶೀಲನೆ ಅವಧಿ ವಿಸ್ತರಣೆ- ಸುದ್ದಿಜಾಲ ನ್ಯೂಸ್ Read More »

ಸಿಬಿಎಸ್ ಇ 9-10 ನೇ ತರಗತಿ ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ನಿಗದಿ – ಸುದ್ದಿಜಾಲ ನ್ಯೂಸ್

9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಡಿ.15 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಅಧಿಕೃತ ಮಾಹಿತಿ ನೀಡಿದೆ. ನೋಂದಣಿಗೆ ಲಿಂಕನ್ನು ಸಿಬಿಎಸ್ ಇ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಒಂಭತ್ತು ಹಾಗೂ ಹತ್ತನೇ ತರಗತಿಗೆ ಆನ್ಲೈನ್ ಪೋರ್ಟಲ್ ಮೂಲಕ ನೋಂದಾಯಿಸಬಹುದು ಎಂದು ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಆನ್ಲೈನ್ ನೋಂದಣಿ ಪ್ರಕ್ರಿಯೆ ಮೂಲಕ ಹೆಸರು ಸಲ್ಲಿಸಿದ 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ

ಸಿಬಿಎಸ್ ಇ 9-10 ನೇ ತರಗತಿ ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ನಿಗದಿ – ಸುದ್ದಿಜಾಲ ನ್ಯೂಸ್ Read More »

ಮುಂದಿನ ಶೈಕ್ಷಣಿಕ ವರ್ಷದಿಂದ ‘ ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿ : ಸಚಿವ ಬಿ.ಸಿ.ನಾಗೇಶ್- ಸುದ್ದಿಜಾಲ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಎನ್ ಇಪಿ ಜಾರಿಯಾಗಿರುವ ಕುರಿತು ರಚನೆಯಾಗಿರುವ 26. ಉಪಸಮಿತಿಗಳು ಡಿಸೆಂಬರ್ ಅಂತ್ಯದಲ್ಲಿ ವರದಿ ನೀಡಲಿದ್ದು, ವರದಿಯನ್ನು ಪರಿಶೀಲಿಸಿ ಮುಂದಿನ ವರ್ಷದಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿ ಎನ್ ಇಪಿ ಜಾರಿಗೊಳಿಸಲಾಗುವುದು ಎಂದು ನಾಗೇಶ್ ಹೇಳಿದ್ದಾರೆ. ಎನ್ ಇಪಿ ಜಾರಿಗೊಳಿಸುವಲ್ಲಿ ಪೂರ್ವ, ಪ್ರಾಥಮಿಕ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಮುಂದಿನ

ಮುಂದಿನ ಶೈಕ್ಷಣಿಕ ವರ್ಷದಿಂದ ‘ ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿ : ಸಚಿವ ಬಿ.ಸಿ.ನಾಗೇಶ್- ಸುದ್ದಿಜಾಲ ನ್ಯೂಸ್ Read More »