ಅಕಾಲಿಕ ಮಳೆಗೆ ನೀರು ಪಾಲಾದ ಮೆಣಸಿನಹಣ್ಣು

ಗದಗ ಜಿಲ್ಲಾದ್ಯಂತ ಅತಿ ಹೆಚ್ಚು ಯರೇ ಭೂಮಿಯನ್ನು ಹೂಂದಿದ  ಜಮೀನುಗಳು ಇದ್ದು ಅಧಿಕ ಪ್ರಮಾಣದಲ್ಲಿ ಈರುಳ್ಳಿ ಜೊತೆಗೆ ಮಿಶ್ರ ಬೆಳೆಯಾಗಿ ಮೆಣಸಿನ ಕಾಯಿ ಬೇಳೆಯುತಿದ್ದು ಈಗ ಅಕಾಲಿಕ ಮಳೆಗೆ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆಯಾಗಿದೆ.

ಇನ್ನು ಮೆಣಸಿನಹಣ್ಣು ಕಟಾವಿಗೆ ಬಂದಿದ್ದು ಹಣ್ಣುನ್ನು ಬಿಡಿಸಿಕೊಂಡು ಹತ್ತು ದಿನದಿಂದ ಇಪ್ಪತ್ತು ದಿನಗಳ ಕಾಲ ಭೂವಿಯ ಮೇಲೆ ಹಾಗೂ ಮನೆಯ ಮ್ಯಳಗಿಯ ಮೇಲೆ ಹಾಕಿ  ಒಣಗಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆಂದಿದ್ದ   ಒಣಮೆಣಸಿನಕಾಯಿ ಭಾನುವಾರ ದಿಂದ ಸುರಿಯುತ್ತಿರುವ  ಮ್ಯಾಡೂಸ್ ಚೆಂಡುಮಾರುತ ಮಳೆಗೆ ಮೆಣಸಿನಕಾಯಿ ನೀರುಪಾಲಾಗಿದ್ದು ಅನ್ನುದಾತರು ಕೈ ಕೈ ಹಿಸುಕಿಕೋಳ್ಳುತ್ತಿದಾರೆ.

ಒಣಮೆಣಸಿನಕಾಯಿ ಒಂದು ಕ್ವಿಂಟಾಲಗೆ 35 ರಿಂದ  45 ಸಾವಿರುಪಾಯಿಗಳವರಗೆ ದರ ಇದ್ದು ಅಧಿಕ ಹಣ ಬರುತಿತ್ತು ಆದರೆ ಏಕಾಏಕಿ ಮಳೆ ಸುರಿದು ಮೆಣಸಿನಹಣ್ಣು ಹಾಳಾಗಿ ಕೋಳೆತು ತಿಪ್ಪೆ ಪಾಲಾಗಿವೆ ಎಂದು ತಿಮ್ಮಾಪೂರ ಗ್ರಾಮದ ರೈತರಾದ ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಹುಚ್ಚಿರಪ್ಪ ಜೋಗಿನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮ್ಯಾಡೂಸ್ ಚೆಂಡುಮಾರುತ ಮಳೆಯಿಂದ ಜಿಲ್ಲೆಯ ಯರೇಭಾಗದ ಭೂಮಿಯಲ್ಲಿ ಅತ್ಯಧಿಕವಾಗಿ ಬೆಳೆದ ಮೆಣಸಿನಕಾಯಿ ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮೆಣಸಿನಕಾಯಿ ಇಳುವರಿ ಕಡಿಮೆಯಾಗಿ ಅಳಿದುಳಿದ ಮೆಣಸಿಹಣ್ಣು ಇಂದು ಅಕಾಲಿಕ ಮಳೆಗೆ ನೀರು ಪಾಲಾಗಿದೆ.

ಕೈಗೆ ಬಂದ ಬೆಳೆ ಉಪಯೋಗಕ್ಕೆ ಬಾರದಂತೆಯಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಬೆಳೆ ಮಣ್ಣು ಪಾಲಾಗಿದೆ. ಕಳೆದ ನವೆಂಬರ ತಿಂಗಳ ಮೊದಲ ವಾರದಿಂದ ರೈತರು ಮೆಣಸಿಹಣ್ಣುನ್ನು ಬಿಡಿಸಿ ತಮ್ಮ ತಮ್ಮ ಜಮೀನಿನುಗಳಲ್ಲಿ ಹಾಕಿದರು . ಮಾರುಕಟ್ಟೆಗೆ ಕಳುಹಿಸಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಒಣಗಿಸಬೇಕು.ಸದ್ಯ ಅಪಾರ ಪ್ರಮಾಣದ ಬೆಳೆ ಹಾಳಾದರು ರೈತ ಗೋಳು ಕೇಳುವವರು ಇಲ್ಲದಂತಾಗಿದೆ.

*ಅಪಾರ ಖರ್ಚು*

ಒಂದು ಎಕರೆಗೆ 1 ಕೆಜಿಗೆ ಮೆಣಸಿನ ಬೀಜಕ್ಕೆ 1500 ರಿಂದ 2000 ರೂಪಾಯಿಗಳು 2 ಚೀಲ ರಾಸಾಯನಿಕ ಗೊಬ್ಬರಕ್ಕೆ 5000 ರುಪಾಯಿ ಬಿತ್ತನೆ ಬಾಡಿಗೆ 3000 ರೂಪಾಯಿ ಹಾಗೂ ಕೀಟನಾಶಕಗಳ ಸಿಂಪಡನೆ,ಕಳೆ ತೆಗೆಯುವ ಕೂಲಿ ಎಲ್ಲಾ ಸೇರಿ 15 ರಿಂದ 20 ಸಾವಿರ ರೂಪಾಯಿ ಖರ್ಚಾಗಿದೆ . ಅಕಾಲಿಕ ಮಳೆಯಿಂದ ಇಳುವರಿ ಕಡಿಮೆಯಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಬಗ್ಗ ಸಮೀಕ್ಷೆ ನಡೆಸಿ ಸುಕ್ತು ಪರಿಹಾರ ನೀಡಬೇಕು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆಯ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಆಗ್ರಹಿಸಿದ್ದಾರೆ.