ಅಮೆಜಾನ್ ಗೆ ಬಿಗ್ ಬಜ಼ಾರ್ ಕೇಸಲ್ಲಿ ರಿಲಯನ್ಸ್ ವಿರುದ್ಧ ಜಯ

ಫ್ಯೂಚರ್ ಗ್ರೂಪ್ ( ಬಿಗ್ ಬಜ಼ಾರ್ ನ ಮಾತೃ ಸಂಸ್ಥೆ) ಮತ್ತು ರಿಲಯನ್ಸ್ ನಡುವಿನ 24,731 ಕೋಟಿ ರೂ. ಒಪ್ಪಂದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯೊಡ್ಡಿದ್ದೆ.

ಸಿಂಗಾಪುರದ ತುರ್ತು ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ್ದ 2020 ರ ಆದೇಶ ಸೂಕ್ತವಾಗಿದೆ ಮತ್ತು ಅದನ್ನು ಭಾರತದ ಮಧ್ಯಸ್ಥಿಕೆ ಕಾನೂನಿನ ಅನ್ವಯವೂ ಜಾರಿ ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

ಕಳೆದ ವರ್ಷ ಫ್ಯೂಚರ್ ಸಮೂಹ ತನ್ನ 24,731 ಕೋಟಿ ರು.ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿಗೆ ಮಾರಲು ಒಪ್ಪಂದ ಮಾಡಿಕೊಂಡಿತ್ತು. ಫ್ಯೂಚರ್ ಗ್ರೂಪ್ ಮತ್ತು ಅಮೆಜ಼ಾನ್ ನಡುವಿನ ಒಪ್ಪಂದದ ಪ್ರಕಾರ ಫ್ಯೂಚರ್ ಗ್ರೂಪ್, ತನ್ನ ರಿಟೇಲ್ ಕಂಪನಿಗಳ ಆಸ್ತಿಯನ್ನು ರಿಲಯನ್ಸ್ ಸೇರಿದಂತೆ 15 ಕಂಪನಿಗಳಿಗೆ ಮಾರುವಂತಿಲ್ಲ ಎಂಬುದು ಅಮೆಜ಼ಾನ್ ವಾದವಾಗಿತ್ತು. ಈ ನಿಯಮವನ್ನು ಫ್ಯೂಚರ್ ರಿಟೇಲ್ ನ್ನು ರಿಲಯನ್ಸ್ ರಿಟೇಲ್ ಗೆ ಮಾರಾಟ ಮಾಡಲಾಗುತ್ತಿದೆ ಎನ್ನುವುದು ಅಮೆಜ಼ಾನ್ ವಾದ. ಹೀಗಾಗಿ ಈ ಒಪ್ಪಂದಕ್ಕೆ ತಡೆ ನೀಡಬೇಕೆಂದು ಎಂದು ಅಮೆಜ಼ಾನ್ ಕೋರ್ಟ್ ಮೆಟ್ಟಿಲೇರಿತ್ತು. ಸಿಂಗಾಪುರದ ತುರ್ತು ಮಧ್ಯಸ್ಥಿಕೆ ಕೇಂದ್ರವೂ ರಿಲಯನ್ಸ್ ಜೊತೆ ಫ್ಯೂಚರ್ ಸೇರ್ಪಡೆ ಗೆ ತಡೆ ನೀಡಿತ್ತು. ಸುಪ್ರೀಂಕೋರ್ಟ್ ಸಹ ಈ ತೀರ್ಪನ್ನು ಎತ್ತಿ ಹಿಡಿದಿದೆ.