ಸ್ಕ್ರ್ಯಾಪ್ ಮೆಟಲ್ ಬಳಸಿ 4 ಚಕ್ರದ ವಾಹನ ತಯಾರಿ : ಆನಂದ್ ಮಹೀಂದ್ರಾ ಮೆಚ್ಚುಗೆ

ಮುಂಬೈ : ಸ್ಕ್ರ್ಯಾಪ್ ಮೆಟಲ್ ಬಳಸಿ ತಯಾರಿಸಿದ ನಾಲ್ಕು ಚಕ್ರದ ವಾಹನವೀಗ ಆನಂದ್ ಮಹೀಂದ್ರ ಅವರನ್ನು ಬೆರಗಾಗುವಂತೆ ಮಾಡಿದೆ.

ಈ ವಾಹನವನ್ನು ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಅಂದಹಾಗೆ ಈ ವಾಹನ ತಯಾರಿಸಲು ತಗುಲಿದ ಖರ್ಚು ಸರಿ ಸುಮಾರು ₹ 60,000/-. ಈ ನಾಲ್ಕು ಚಕ್ರದ ವಾಹನಗಳಲ್ಲಿಯೂ ಕಿಕ್ ಸ್ಟಾರ್ಟ್ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.

ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ವಾಹನದ ತಯಾರಕ ದತ್ತಾತ್ರೇಯ ಲೋಹರ್ ಅವರನ್ನು ಒಳಗೊಂಡಿರುವ 45 ಸೆಕೆಂಡ್ ಗಳ ವಿಡಿಯೋ ಕ್ಲಿಪ್ ನ್ನು ಹಂಚಿಕೊಂಡಿದ್ದಾರೆ.

ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂಬುದಾಗಿ ಆನಂದ್ ಮಹೀಂದ್ರಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಹಾಗೂ ಲೋಹರ್ ಅವರಿಗೆ ಬೊಲೆರೋ ವಾಹನವನ್ನು ನೀಡುವುದಾಗಿಯೂ ಮಹೀಂದ್ರಾ ತಿಳಿಸಿದ್ದಾರೆ.

ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ಕಮ್ಮಾರರ ಕುಟುಂಬಕ್ಕೆ ಲೋಹರ್ ಸೇರಿದವರು. ತಮ್ಮ ಮಗನ ಆಸೆಯನ್ನು ಈಡೇರಿಸಲು ದತ್ತಾತ್ರೇಯ ಲೋಹರ್ ಅವರು ಈ ವಾಹನವನ್ನು ತಯಾರಿಸಿದ್ದಾರೆ.