ಸ್ಮಾರ್ಟ್ ಸಿಟಿ ಯೋಜನೆ : ವಾಯುಮಾಲಿನ್ಯ ಕಡಿಮೆ ಮಾಡಲು ಬಂದಿದೆ ಹೊಸ ಬೈಸಿಕಲ್ , ಇದರ ವಿಶೇಷತೆ ತಿಳಿದರೆ ನೀವು ಬೆರಗಾಗುವುದು ಖಂಡಿತ – ಸುದ್ದಿಜಾಲ ನ್ಯೂಸ್

ಹುಬ್ಬಳ್ಳಿ : ಪರಿಸರ ಸ್ನೇಹಿ ಸಾರಿಗೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಾರಿಗೆ ತಂದಿರುವ ಬೈಸಿಕಲ್ ಯೋಜನೆಯ 340 ಸೈಕಲ್ ಗಳು ಈಗ ಮಲೆಷ್ಯಾದಿಂದ ಹುಬ್ಬಳ್ಳಿಗೆ ಬಂದಿವೆ.

ಒಟ್ಟು 6 ಕೋಟಿ ವೆಚ್ಚದಲ್ಲಿ ಈ ಬೈಸಿಕಲ್ಲನ್ನು ತರಿಸಲಾಗಿದೆ. 34 ಕಡೆಗಳಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ 7 ನಿಲ್ದಾಣಗಳ ನಿರ್ಮಾಣ ಪೂರ್ಣಗೊಂಡಿದೆ‌. ಟೆಂಡರ್ ಶ್ಯೂರ್ ನ ತೋಳನಕೆರೆಯಿಂದ ವಿದ್ಯಾನಗರದ ಮುಖ್ಯ ರಸ್ತೆಯವರೆಗೆ ಬೈಸಿಕಲ್ ಗಾಗಿಯೇ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. ಈ ಬೈಸಿಕಲ್ ಬಳಸುವ ಮುಖ್ಯ ಉದ್ದೇಶ ಪೆಟ್ರೋಲ್ ಡೀಸೆಲ್ ಬಳಸುವಂತಹ ವಾಹನಗಳ ಬಳಕೆ ಕಡಿಮೆಯಾದರೆ ವಾಯು ಮಾಲಿನ್ಯ ಕಡಿಮೆಯಾಗುತ್ತೆ ಎಂದು.

ಪ್ರತ್ಯೇಕ ಕಾರಿಡಾರ್ ನಿರ್ಮಿಸಲು ಸಾಧ್ಯವಾಗದಿದ್ದ ಕಡೆ, ರಸ್ತೆ ಚಿಕ್ಕದಿದ್ದಾಗ ಅದರ ಒಂದು ಭಾಗದಲ್ಲಿ ಬಣ್ಣ ಬಳಿದು ಗುರುತು ಹಾಕಲಾಗಿದೆ. ಒಟ್ಟಾರೆಯಾಗಿ 30 ಕಿ.ಮೀ. ರಸ್ತೆಯಲ್ಲಿ ಸೈಕಲ್ ಯೋಜನೆ ಜಾರಿಗೊಳಿಸಲಾಗಿದೆ. ಈ ಪಥದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಸೈಕಲ್ ಗಳಷ್ಟೇ ಅಲ್ಲದೇ ಸಾಮಾನ್ಯ ಸೈಕಲ್ ಗಳನ್ನೂ ಓಡಿಸಲು ಅವಕಾಶ ನೀಡಲಾಗುತ್ತದೆ.

ಸಾಮಾನ್ಯ ಸೈಕಲ್ ಗಿಂತ ಸ್ಮಾರ್ಟ್ ಸಿಟಿ ಸೈಕಲ್ ತುಂಬಾ ಹಗುರ. ಅಗತ್ಯಕ್ಕೆ ತಕ್ಕಂತೆ ಸೀಟು, ಹ್ಯಾಂಡಲ್ ಹಾಗೂ ಎತ್ತರ ಹೊಂದಿಸಿಕೊಳ್ಳಬಹುದು. ಈ ಸೈಕಲ್ ಪಡೆಯಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳುವುದು ಅವಶ್ಯ. ಹಾಗೂ ಶುಲ್ಕವನ್ನು ಆನ್ಲೈನ್ ನಲ್ಲಿಯೇ ಪಾವತಿಸಬೇಕು. ಈ ಸೈಕಲ್ ನ ವಿಶೇಷತೆ ಏನೆಂದರೆ ಇದರಲ್ಲಿ ಆರ್ ಎಫ್ಐಡಿ ಚಿಪ್ ಅಳವಡಿಸಲಾಗಿರುತ್ತದೆ. ಇದರಿಂದ ಸೈಕಲ್ ಎಲ್ಲಿದೆ ಎನ್ನುವುದನ್ನು ಪತ್ತೆ ಹೆಚ್ಚಲು ಸುಲಭವಾಗುತ್ತದೆ.

ಹುಬ್ಬಳ್ಳಿಯಲ್ಲಿ 34 ಕಡೆ ಸೈಕಲ್ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಇಲ್ಲಿಂದ ಸೈಕಲ್ ಗಳನ್ನು ಪಡೆದು, ತಾವು ಬಯಸಿದ ಸ್ಥಳಗಳಿಗೆ ಹೋಗಬಹುದು. ಅಲ್ಲಿಗೆ ಹತ್ತಿರದಲ್ಲಿರುವ ನಿಲ್ದಾಣಕ್ಕೆ ಸೈಕಲ್ ಗಳನ್ನು ಒಪ್ಪಿಸಬೇಕು.

ಬೈಸಿಕಲ್ ಬಳಕೆ ಹೆಚ್ಚಾದರೆ ಪೆಟ್ರೋಲ್, ಡೀಸೆಲ್ ನಿಂದ ಸಂಚರಿಸುವ ವಾಹನಗಳ ಬಳಕೆಯೂ ಕಡಿಮೆಯಾಗಲಿದೆ. ಸುಮಾರು 8.5 ಕೋಟಿ ಮೊತ್ತದ ಟೆಂಡರ್ ಇದಾಗಿದೆ. ಜನರು ಸೈಕಲ್ ತುಳಿಯುವುದರಿಂದ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಯಾವುದೇ ವಾಹನಗಳನ್ನು ಅವಲಂಬಿಸದೆ ಬೈಕ್, ಇತರೆ ವಾಹನಗಳನ್ನು ಕೊಳ್ಳಲು ಹಣ ತೊಡಗಿಸದೆ ಕಡಿಮೆ ಖರ್ಚಿನಲ್ಲಿ ಸಂಚರಿಸಲು ಸಹಕಾರಿಯಾಗಲಿದೆ.

ಸೈಕಲ್ ಗಳನ್ನು ಪೂರೈಸುವುದು, ನಿಲ್ದಾಣಗಳನ್ನು ನಿರ್ಮಿಸುವುದು ಹಾಗೂ ಅವುಗಳ ನಿರ್ವಹಣೆ ಸೇರಿದಂತೆ ಒಟ್ಟಾರೆ ಯೋಜನೆಯನ್ನು ಬೆಂಗಳೂರಿನ ಟ್ರಿನಿಟಿ ಟೆಕ್ನಾಲಜೀಸ್ ಸಾಫ್ಟ್‌ವೇರ್ ಸೆಲ್ಯೂಷನ್ಸ್ ಪ್ರೈವೇಟ್ ಕಂಪನಿ ಲಿಮಿಟೆಡ್ ಕಂಪನಿಗೆ ವಹಿಸಲಾಗಿದೆ.

ವಿದ್ಯಾನಗರ ಭಾಗದ ಎಂಟು ಬೈಸಿಕಲ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹಾಗೂ ಇನ್ನುಳಿದ ಸೈಕಲ್ ನಿಲ್ದಾಣಗಳಲ್ಲಿ ನಂತರ ಸೈಕಲ್ ಸಂಚಾರ 15 ದಿನಗಳಲ್ಲಿ ಮೊದಲ ಹಂತದ ನಡೆಯಲಿದೆ.