ನಾಯಕತ್ವ ಬದಲಾವಣೆಯ ಹಾದಿಯಲ್ಲಿ ರಿಲಯನ್ಸ್ ? – ಸುದ್ದಿಜಾಲ ನ್ಯೂಸ್

ನವದೆಹಲಿ : ಕಂಪನಿಯ ನಾಯಕತ್ವದಲ್ಲಿ ಬದಲಾವಣೆ ಆಗುವ ಕುರಿತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಹೇಳಿದ್ದಾರೆ.

ಯುವ ತಲೆಮಾರಿಗೆ ದಾರಿ ಮಾಡಿಕೊಡುವ ಮೂಲಕ ಈ ಬದಲಾವಣೆ ಆಗಬೇಕಿದೆ ಎಂದು ಹೇಳಿದ್ದಾರೆ.

ರಿಯಲನ್ಸ್ ಕಂಪನಿಯು ಈಗ ಮಹತ್ವಪೂರ್ಣವಾದ ನಾಯಕತ್ವ ಬದಲಾವಣೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇದೆ ಎಂದು ಹೇಳಿದ್ದಾರೆ.

ನನ್ನನ್ನೂ ಸೇರಿಸಿ ಎಲ್ಲಾ ಹಿರಿಯರು ಹೆಚ್ಚು ಸ್ಪರ್ಧಾತ್ಮಕ ಆಗಿರುವ, ಬಹಳ ಬದ್ಧತೆಯನ್ನು ಹೊಂದಿರುವ ಮತ್ತು ವಿಶ್ವಾಸ ಮೂಡಿಸುವ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು. ನಾವು ಮಾರ್ಗದರ್ಶನ, ಪ್ರೋತ್ಸಾಹ ನೀಡಬೇಕು. ಅವರನ್ನು ಸಶಕ್ತರನ್ನಾಗಿಸಬೇಕು , ಚೆನ್ನಾಗಿ ಕೆಲಸ ಮಾಡಿದಾಗ ಅವರ ಬೆನ್ನುತಟ್ಟಬೇಕು ಎಂದಿದ್ದಾರೆ.