‘ಓಲಾ‌’ ಪ್ರಯಾಣಿಕರೇ ಗಮನಿಸಿ : ಇನ್ನು ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ – ಸುದ್ದಿಜಾಲ ನ್ಯೂಸ್

ಕೊರೊನಾ ನಂತರ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಓಲಾ, ಉಬರ್ ನಂತಹ ವಾಹನಗಳನ್ನೇ ಬಳಸುವವರು ಹೆಚ್ಚು. ಕೆಲವೊಮ್ಮೆ ಓಲಾ ಕ್ಯಾಬ್ ಬಳಕೆದಾರರು, ರೈಡ್ ಕ್ಯಾನ್ಸಲ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತುಂಬಾ ಸಮಯ ಕಾದ ನಂತರ ಅಥವಾ ಇನ್ನೇನು ವಾಹನ ಹತ್ತಬೇಕು ಎನ್ನುವಾಗ ಎಲ್ಲಿಗೆ ಎಂದು ಕೇಳುವ ಚಾಲಕರು ರೈಡ್ ಕ್ಯಾನ್ಸಲ್ ಮಾಡುವ ಉದಾಹರಣೆ ತುಂಬಾ ಇದೆ. ಈಗ ಸಿಹಿ ಸುದ್ದಿ ಏನೆಂದರೆ ಇನ್ನು ಮುಂದೆ ಓಲಾ ಬಳಕೆದಾರರಿಗೆ ಈ ಸಮಸ್ಯೆ ಇರುವುದಿಲ್ಲ.

ಓಲಾ ಚಾಲಕರು, ಪ್ರಯಾಣಿಕರ ಬಳಿ ಎಲ್ಲಿಗೆ ಎಂದು ಪ್ರಶ್ನೆ ಕೇಳುವುದಿಲ್ಲ. ವಾಹನ ಬುಕ್ ಆಗುವ ಸಂದರ್ಭದಲ್ಲಿಯೇ ಚಾಲಕರಿಗೆ ಎಲ್ಲಿ ಹೋಗಬೇಕು ಹಾಗೂ ಪ್ರಯಾಣಿಕನ ಪಾವತಿ ವಿಧಾನ ತಿಳಿಯಲಿದೆ. ಒಂದು ವೇಳೆ ದೂರದ ಪ್ರಯಾಣ ಬೇಡ ಎನ್ನುವ ಚಾಲಕ ತಕ್ಷಣ ಡ್ರೈವ್ ಕ್ಯಾನ್ಸಲ್ ಮಾಡುತ್ತಾನೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಸಮಯ ಕಾಯುವ ಅವಶ್ಯಕತೆ ಬರುವುದಿಲ್ಲ.

ಓಲಾ ಸಂಸ್ಥಾಪಕ ಭವಿಶ್ ಅಗರ್ ವಾಲ್, ಚಾಲಕನಿಗೆ ಪ್ರಯಾಣಿಕರ ಗಮ್ಯಸ್ಥಾನದ ಮಾಹಿತಿ ಮೊದಲೇ ಸಿಗ್ತಿರಲಿಲ್ಲ. ಇನ್ನು ಮುಂದೆ ಚಾಲಕರಿಗೆ ಹೋಗುವ ಜಾಗ ತಿಳಿಯುತ್ತದೆ. ಹಾಗಾಗಿ ಡ್ರೈವ್ ಕ್ಯಾನ್ಸಲ್ ಮಾಡುವ ಸಮಸ್ಯೆ ಕಡಿಮೆಯಾಗಲಿದೆ.