ಓಡ್ತಾ ಓಡ್ತಾ ಚಾರ್ಜ್ ಆಗೋ ಇ-ಬೈಕ್ : ಪೆಟ್ರೋಲ್ ಬೇಡ, ಏನೂ ಬೇಡ, ಈ ಬೈಕ್ ನ ವಿಶೇಷತೆ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ – ಸುದ್ದಿಜಾಲ ನ್ಯೂಸ್

ನವದೆಹಲಿ : ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನ ಪಡುತ್ತಲೇ ಇದೆ. ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಇಲೆಕ್ಟ್ರಿಕಲ್ ಗಾಡಿಗಳು ಬೀದಿಗಿಳಿದಿವೆ. ಬೈಕ್ , ಸ್ಕೂಟರ್ ಅಷ್ಟೇ ಅಲ್ಲದೇ ಬಸ್ ಕೂಡಾ ಈಗ ಎಲ್ಲವೂ ಎಲೆಕ್ಟ್ರಿಕ್ ಆಗಿದೆ.

ಇದಾಗಲೇ ಎಲೆಕ್ಟ್ರಿಕ್ ಬೈಕ್ ಗಳ ಬಗ್ಗೆ ಜನ ಒಲವು ತೋರಿಸಿದ್ದಾರೆ. ಇದರ ಮಾರಾಟ ಕೂಡಾ ಹೆಚ್ಚಾಗಿಯೇ ಆಗುತ್ತಿದೆ. ಇಲೆಕ್ಟ್ರಿಕ್ ಚಾರ್ಜಿಂಗ್ ಬೈಕ್ ಗಳು ನೂರಾರು ಕಿಮೀ ಓಡುವುದು ನಿಜವಾದರೂ, ಕೆಲವು ಕಡೆಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಇಲ್ಲದೇ ಪರದಾಡುವ ಸ್ಥಿತಿ ಇದೆ. ಅಂಥವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ ಪುದುಚೇರಿ ಮೂಲದ ವಿಜಯನ್ ಪ್ರೇಮಾನಂದ್. ಅದೇನೆಂದರೆ ಇವರು ಕಂಡು ಹಿಡಿದಿರುವ ಬೈಕ್ ನ್ನು ಚಾರ್ಜ್ ಮಾಡುವ ಅಗತ್ಯ ಕೂಡ ಇಲ್ಲ. ಹಾಗೆಂದು ಪೆಟ್ರೋಲ್ ನಿಂದ ಓಡಲ್ಲ. ಇದಕ್ಕೆ ಉತ್ತರ ಇಲ್ಲಿದೆ. ವಿಜಯನ್ ಅವರು ಕಂಡು ಹಿಡಿದಿರುವ ಬೈಕ್ ನಲ್ಲಿರುವ ಎರಡು ಬ್ಯಾಟರಿಗಳು ತಂತಾನೇ ಚಾರ್ಜ್ ಆಗುತ್ತದೆ. ಅದೂ ಗಾಡಿ ಓಡ್ತಾ ಓಡ್ತಾ‌ ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಸ್ಟೇಷನ್ ಗೆ ಹೋಗೋ ಅಗತ್ಯವಿಲ್ಲ. ಚಲಿಸುವಾಗಲೇ ಚಾರ್ಜ್ ಆಗುತ್ತೆ ಬೈಕ್.

ಇದರಿಂದ ವಿದ್ಯುತ್ ಉಳಿತಾಯ ಆಗುತ್ತದೆ. ವಿಜಯನ್ ಅವರು ಕೇಂದ್ರ ನೀತಿ ಮತ್ತು ಪ್ರಚಾರ ಇಲಾಖೆಯಿಂದ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ ವಿಜಯನ್.

ಇದರಲ್ಲಿ ಇರುವ ಬ್ಯಾಟರಿಗಳು ಪರಸ್ಪರ ಚಾರ್ಜ್ ಆಗುವಂತೆ ವಿನ್ಯಾಸ ಮಾಡಲಾಗಿದೆ. ಈ ಎರಡೂ ಬ್ಯಾಟರಿಗಳು ಚಾರ್ಜ್ ಆಗುವುದರಿಂದ ಶಕ್ತಿಯ ಬಳಕೆ ತುಂಬಾ ಕಡಿಮೆ. ಇದರಿಂದಾಗಿ ಇದರಿಂದ ಬೇಗನೆ ಚಾರ್ಜ್ ಮುಗಿಯುವುದಿಲ್ಲ ಎಂದರ್ಥ.

ಈ ತಂತ್ರಜ್ಞಾನವನ್ನು ಬಳಸಲು, ಹಲವು ವಾಹನ ತಯಾರಕರನ್ನು ಸಂಪರ್ಕಿಸಲಾಗಿದೆ. ಕಂಪನಿಗಳ ಪ್ರತಿಕ್ರಿಯೆ ಬರಬೇಕು. ಎಲ್ಲಾ ಓಕೆಯಾದರೆ, ಬೈಕ್ ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ವಿಜಯನ್ ಅವರ ದೃಢ ವಿಶ್ವಾಸ.