ಸುರಕ್ಷಿತ ಸೆಕ್ಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಉಪಯೋಗಕರ ಟಿಪ್ಸ್ – ಸುದ್ದಿಜಾಲ ನ್ಯೂಸ್

ಎಲ್ಲರಿಗೂ ತಿಳಿದಿರುವಂತೆ ಸುರಕ್ಷಿತ ಸಂಭೋಗಕ್ಕೆ ಕಾಂಡೋಮ್ ಬಹಳ ಮುಖ್ಯ. ಆದರೆ ಕಾಂಡೋಮ್ ಬಗ್ಗೆ ಜ್ಞಾನವಿರಬೇಕು. ಒಂದೇ ಕಾಂಡೋಮ್ ಪದೇ ಪದೇ ಬಳಕೆ ಸಾಧ್ಯವಿಲ್ಲ. ದಿನಾಂಕ ಮುಗಿದ ಕಾಂಡೋಮ್ ಬಳಕೆ ಬೇಡ. ಹೊಸ ಕಾಂಡೋಮ್ ಬಳಕೆ ಮಾಡಬೇಕು.

ಮಾದಕ ವಸ್ತುಗಳನ್ನು ಸೇವಿಸಿದಾಗ, ಮದ್ಯ ಸೇವನೆ ಮಾಡಿದಾಗ, ಸಂಭೋಗಕ್ಕೆ ಮುಂದಾಗಬೇಡಿ. ಮದ್ಯದ ನಶೆಯಲ್ಲಿ ಸುರಕ್ಷತೆ ಮರೆಯುತ್ತೀರಿ. ಒಮ್ಮೆ ಮಾಡಿದ ತಪ್ಪು ಜೀವನಪೂರ್ತಿ ನರಳುವಂತೆ ಮಾಡುವ ಸಾಧ್ಯತೆಗಳಿರುತ್ತವೆ.

ಸಂಭೋಗದಲ್ಲಿ ಪ್ರಯೋಗಗಳು ಆಗಬೇಕು. ಆದರೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಆತುರದಲ್ಲಿ ತಪ್ಪುಗಳನ್ನು ಮಾಡಬೇಡಿ. ಇದು ಅಪಾಯಕ್ಕೆ ಆಹ್ವಾನ ನೀಡಬಹುದು.

ಯಾವುದಾದರೂ ಲೈಂಗಿಕ ಸಮಸ್ಯೆ ನಿಮಗೆ ಶುರುವಾಗಿದ್ದರೆ, ನಾಚಿಕೊಳ್ಳುವ ಅಗತ್ಯವಿಲ್ಲ. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ನಿರ್ಲಕ್ಷ್ಯ ಆಪತ್ತಿಗೆ ಆಹ್ವಾನ ನೀಡಬಹುದು‌

ನೀವು 26 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಎಚ್‌ಪಿವಿ ಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವ್ಯಾಕ್ಸಿನೇಷನ್‌ ಉತ್ತಮವಾಗಿದೆ.

ಸಂಭೋಗದ ನಂತರ ಶೌಚಾಲಯಕ್ಕೆ ಅವಶ್ಯವಾಗಿ ಹೋಗಿ. ಖಾಸಗಿ ಅಂಗವನ್ನು ಸಂಭೋಗದ ನಂತರ ಸ್ವಚ್ಛಗೊಳಿಸಿಕೊಂಡರೆ ಲೈಂಗಿಕ ಸಮಸ್ಯೆಗಳು ಕಾಡುವುದಿಲ್ಲ. ಸೋಂಕು ಹರಡುವ ಅಪಾಯ ಕಡಿಮೆಯಿರುತ್ತದೆ.