relationship tips : ಸಂಸಾರದಲ್ಲಿ ಮೊಬೈಲ್‌ ಬಳಕೆ ಬಗ್ಗೆಯೂ ಇರಲಿ ಎಚ್ಚರ

ಸಂಸಾರದಲ್ಲಿ ಗೊಂದಲ ಜಗಳ ಆಗೋಕೆ ಅನೇಕ ಕಾರಣಗಳಿವೆ. ಇವುಗಳ ಮಧ್ಯೆ ಮೊಬೈಲ್‌ ಕೂಡ ಬಂದಿದೆ. ಮೊಬೈಲ್‌ ಅನ್ನೋ ಮಾಯಾವಿ ಅದೆಷ್ಟೋ ಸಂಸಾರಗಳಲ್ಲಿ ಹುಳಿ ಹಿಂಡುತ್ತಿದೆ. ಮೊಬೈಲ್‌ ಬಳಕೆಯ ವಿಷಯವಾಗಿಯೇ ಅದೆಷ್ಟೋ ಸಂಸಾರಗಳು ಅಂತ್ಯ ಕಂಡ ಉದಾಹಣೆಗಳೂ ಇವೆ.

ಆಧುನಿಕತೆಯಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ. ಆದರೆ ಕೆಲವೊಮ್ಮೆ ಸಂಗಾತಿಗಳು ಮನೆಯಲ್ಲಿದ್ದರೂ ಅಪರಿಚಿತರಂತೆ ಇರುತ್ತಾರೆ. ಇಬ್ಬರೂ ಮೊಬೈಲ್‌ನಲ್ಲಿಯೇ ಮುಳಿಗಿರುತ್ತಾರೆ. ಆದ ಕಾರಣ ಅವರುಗಳ ನಡುವೆ ಭಾವನೆ ಅನ್ಯೋನ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಆಫೀಸ್‌ ಕೆಲಸ ಹೊರೆತು ಪಡಿಸಿ ಮನೆಯಲ್ಲಿ ಮೊಬೈಲ್‌ ಬಳಕೆ ದೀಪಕ್ಕೆ ಮುತ್ತು ಕೊಟ್ಟ ಹಾಗಿರಬೇಕು.

ಎಲ್ಲವನ್ನೂ ಮೊಬೈಲ್‌ನಲ್ಲೇ ಚರ್ಚೆ ಮಾಡುವುದು

ಸಂಗಾತಿಗಳು ಎಲ್ಲವನ್ನೂ ಮೊಬೈಲ್‌ನಲ್ಲೇ ಚರ್ಚೆ ಮಾಡುವುದು ಒಳ್ಳೆಯ ಲಕ್ಷಣಗಳಲ್ಲ. ಪುರುಷರು ಕೆಲವೊಮ್ಮೆ ಗಂಭೀರ ವಿಚಾರಗಳನ್ನೂ ತಮ್ಮ ಸಂಗಾತಿ ಜೊತೆ ಮೊಬೈಲ್‌ನಲ್ಲಿಯೇ ಚರ್ಚೆ ಮಾಡುತ್ತಾರೆ ಆದರೆ ಇದು ಸರಿ ಅಲ್ಲ. ಫೋನ್‌ನಲ್ಲಿ ಸಂಕ್ಷಿಪ್ತವಾಗಿ ಹೇಳಿ,ಮುಂದಿನ ವಿಚಾರವನ್ನು ಮನೆಗೆ ಬಂದು ಮಾತನಾಡುತ್ತೇನೆ ಎಂದು ಹೇಳಿ. ಗಂಭೀರ ವಿಚಾರಗಳನ್ನು ಮುಖಾ ಮುಖು ಕುಂತು ಚರ್ಚಿಸಿ ನಿರ್ಧಾರ ಮಾಡಬೇಕು.

ಮೊಬೈಲ್‌ನಲ್ಲಿಯೇ ಮುಳುಗಿರುವುದು

ಹುಡುಗ ಅಥವಾ ಹುಡುಗಿ ಯಾವಾಗಲೂ ಮೊಬೈಲ್‌ನಲ್ಲಿಯೇ ಮುಳುಗಿದರೆ ಅವರ ಪಾರ್ಟನರ್‌ಗೆ ಇಷ್ಟ ಆಗುವುದಿಲ್ಲ. ಮೊಬೈಲ್‌ ಬಿಟ್ಟು ತಮ್ಮ ಜೊತೆಗೂ ಟೈಂ ಸ್ಪೆಂಡ್‌ ಮಾಡಬೇಕು ಅನ್ನೋ ಆಸೆ ಅವರಲ್ಲಿರುತ್ತದೆ. ಇದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.

ಅತಿಯಾಗಿ ಮೆಸೇಜ್‌ ಮಾಡುವುದು

ಎಲ್ಲವನ್ನೂ ಮೆಸೇಜ್‌ನಲ್ಲಿಯೇ ಉತ್ತರಿಸುವುದು. ಕೆಲ ಗಂಭೀರ ವಿಷಯಗಳನ್ನು ಸಂದೇಶದ ಮೂಲಕವೇ ಚರ್ಚೆ ಮಾಡುವುದು. ಇದು ಮಹಿಳೆಯರು ಒಪ್ಪಿಕೊಳ್ಳುವುದಿಲ್ಲ ಎಂದು ಸಂಶೋಧನೆಯೊಂದು ಹೇಳುತ್ತದೆ.