ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ – ಸುದ್ದಿಜಾಲ ನ್ಯೂಸ್

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ (ಜ.6) ಸಂಜೆ ಪ್ರಕಟ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಪರೀಕ್ಷೆಯು ಮಾರ್ಚ್ 28 ರಿಂದ ಎಪ್ರಿಲ್ 11 ರ ವರೆಗೆ ನಡೆಯಲಿದೆ.

ವೇಳಾಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅವಕಾಶ ನೀಡಲಾಗಿದ್ದು, ಪೋಷಕರು ಜನವರಿ 6 ರಿಂದ 14 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ :

ಮಾರ್ಚ್ 28, 2022 – ಪ್ರಥಮ ಭಾಷೆ
ಮಾರ್ಚ್ 30, 2022 – ದ್ವಿತೀಯ ಭಾಷೆ
ಎಪ್ರಿಲ್ 1, 2022 – ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್
ಎಪ್ರಿಲ್ 4, 2022- ಗಣಿತ, ಸಮಾಜಶಾಸ್ತ್ರ
ಎಪ್ರಿಲ್ 6, 2022 – ಸಮಾಜ ವಿಜ್ಞಾನ
ಎಪ್ರಿಲ್ 8, 2022 – ತೃತೀಯ ಭಾಷೆ
ಎಪ್ರಿಲ್ 11, 2022 – ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ

ಪರೀಕ್ಷಾ ಸಮಯ : ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.

ಆಕ್ಷೇಪಣೆಗಳನ್ನು ಮಂಡಳಿಯ ಅಂತರ್ಜಾಲ www.sslc.karnataka.gov.in ಅಥವಾ ಇ- ಮೇಲ್ ಮೂಲಕ ನಿರ್ದೇಶಕರು ಇಲ್ಲಿಗೆ ಸಲ್ಲಿಸಬಹುದು.