ರಾಜಕೀಯ

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪ್ರಕಟ, 29 ನೂತನ ಸಚಿವರಿಗೆ ಅವಕಾಶ

ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ಪ್ರಕಟಗೊಂಡಿದೆ. ಹಿರಿಯ ಸಚಿವರಿಗೆ ಕೊಕ್‌ ನೀಡಲಾಗಿದೆ. ಅಚ್ಚರಿಯೆಂಬಂತೆ ಎಸ್‌. ಸುರೇಶ್‌ ಕುಮಾರ್‌, ಸಿ.ಪಿ. ಯೋಗೇಶ್ವರ, ಅರವಿಂದ ಲಿಂಬಾವಳಿ, ಜಗದೀಶ್‌ ಶೆಟ್ಟರ್‌ ಮುಂತಾದವರು ಸಂಪುಟದಿಂದ ಹೊರಗುಳಿದಿದ್ದಾರೆ. ಆಯ್ಕೆಯಾದ ನೂತನ ನಾಯಕರ ವಿವರ ಮುಂದಿದೆ. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ ಆರ್.ಅಶೋಕ್- ಪದ್ಮನಾಭ ನಗರ ಎಸ್.ಟಿ.ಸೋಮಶೇಖರ್- ಯಶವಂತಪುರ ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ ಬೈರತಿ‌ ಬಸವರಾಜ – ಕೆ ಆರ್ ಪುರಂ ಬಿ.ಸಿ ಪಾಟೀಲ – ಹಿರೇಕೇರೂರು ಡಾ.ಸಿ.ಎನ್.ಅಶ್ವತ್ಥ ನಾರಾಯಣ – […]

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪ್ರಕಟ, 29 ನೂತನ ಸಚಿವರಿಗೆ ಅವಕಾಶ Read More »

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ, ಯಾರು ಮುಂದಿನ ಮುಖ್ಯಮಂತ್ರಿ?

ಕರ್ನಾಟಕದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರೀಯರಾಗಿದ್ದ, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ರೈತ ನಾಯಕ ಎಂದೇ ಜನಪ್ರಿಯತೆ ಪಡೆದಿದ್ದ ಬಿಎಸ್‌ ಯಡಿಯೂರಪ್ಪ ಇಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೆ ಯಡಿಯೂರಪ್ಪನವರು ಹಂಗಾಮಿ ಮುಖ್ಯಮಂತ್ರಿಯಾಗಿಯೇ ಮುಂದುವರೆಯಲಿದ್ದಾರೆ. ೭೧ ವರ್ಷ ವಯಸ್ಸಿನ ಹಿರಿಯ ರಾಜಕಾರಣಿಯಾಗಿದ್ದರೂ, ರಾಜ್ಯದಲ್ಲಿ ಚುರುಕಾಗಿ ಆಡಳಿತ ನಡೆಸುತ್ತಿದ್ದರು. ಇವರ ನಂತರ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುರಿತು ಚರ್ಚೆ ರಾಜ್ಯದಲ್ಲಿ ಬಿಸಿಯೇರಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ, ಯಾರು ಮುಂದಿನ ಮುಖ್ಯಮಂತ್ರಿ? Read More »