ಸಂತೋಷದ ಬದುಕಿಗೆ ಲಿವಿಂಗ್ ಕೊಠಡಿಯ ವಾಸ್ತು ಹೇಗಿರಬೇಕು?

wood nature man people

ಮನೆಯಲ್ಲಿಕುಟುಂಬ ಸದಸ್ಯರೆಲ್ಲರು ಬಹುತೇಕ ಹೆಚ್ಚು ಸಮಯ ಕಳೆಯುವ ಕೊಠಡಿಯೆಂದರೆ ಲೀವಿಂಗ್‌ ರೂಂ. ಮನೆಯ ಸುಖ, ಸಂತೋಷ, ನೆಮ್ಮದಿ ಹೆಚ್ಚು ವ್ಯಕ್ತವಾಗುವ ಕೊಠಡಿಯೂ ಇದೇ. ಲೀವಿಂಗ್‌ ಕೊಠಡಿಯಲ್ಲಿನಗುನಗುತ್ತ ಕಾಲಕಳೆಯುವ ಕುಟುಂಬ ತಮ್ಮದಾಗಬೇಕೆಂದು ಎಲ್ಲರೂ ಬಯಸುತ್ತಾರೆ.

ನಿಮ್ಮ ಮನೆಯಲ್ಲಿಸುಖ ಶಾಂತಿ ನೆಲೆಸಬೇಕಿದ್ದರೆ ಮನೆಯ ಸಂಪೂರ್ಣ ವಾಸ್ತು ಅತ್ಯುತ್ತಮವಾಗಿರಬೇಕು. ಅದರಲ್ಲಿಯೂ ಮನೆಯ ಲೀವಿಂಗ್‌ ರೂಂ ವಾಸ್ತು ಸರಿಯಾಗಿರಬೇಕು. ಲೀವಿಂಗ್‌ ರೂಂ ಹೇಗಿರಬೇಕು? ಯಾವ ದಿಕ್ಕಿನಲ್ಲಿರಬೇಕು? ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಾಸ್ತುಶಾಸ್ತ್ರದಲ್ಲಿಒಂದಿಷ್ಟು ನೀತಿನಿಯಮಗಳು ಇವೆ. ಈ ರೀತಿಯಿದ್ದರೆ ಮನೆಯಲ್ಲಿಸುಖ, ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳು ಉತ್ತಮವಾಗಿರುತ್ತವೆಯೆಂದು ವಾಸ್ತು ತಜ್ಞರುಗಳು ಹೇಳುತ್ತಾರೆ.

ವಾಸ್ತು ಸಲಹೆ: ಲೀವಿಂಗ್‌ ರೂಂನ ಗೋಡೆಯ ಬಣ್ಣ

ಲೀವಿಂಗ್‌ ರೂಂನ ಗೋಡೆಗೆ ಹೆಚ್ಚು ಗಾಢವಾದ ಬಣ್ಣ ಬಳಿಯೋದು ಉತ್ತಮ ಎನ್ನುತ್ತಾರೆ ವಾಸ್ತ್ರು ತಜ್ಞರು. ಕಣ್ಣುಗಳನ್ನು ಸೆಳೆಯುವ ಬಣ್ಣದಿಂದ ಹಾಲ್‌ ಅತ್ಯುತ್ತಮವಾಗಿ ಕಾಣಿಸುತ್ತದೆ. ಗಾಢ ಬಣ್ಣದಿಂದ ಮನೆಯು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲದೆ ಮನೆಯೊಳಗೆ ಯಾರೇ ಪ್ರವೇಶಿಸಿದರೂ ಅವರನ್ನು ಮೊದಲಿಗೆ ಸೆಳೆಯುತ್ತದೆ. ಮನೆಗೆ ಬರುವ ಅತಿಥಿಗಳೆಲ್ಲರ ಮನಸ್ಸು ಒಳ್ಳೆಯದಿದೆ ಎಂದು ಹೇಳಲಾಗದು. ವಕ್ರದೃಷ್ಟಿಯನ್ನು ಬೀರಿ ನಿಮ್ಮ ಮನೆಗೆ ಕೆಟ್ಟದ್ದನ್ನು ಬಯಸುವವರೂ ಇರಬಹುದು. ಮನೆಯ ಲೀವಿಂಗ್‌ ರೂಂನ ಗೋಡೆಯ ಬಣ್ಣ ಗಾಢವಾಗಿದ್ದರೆ, ಸಹಜವಾಗಿ ಅವರ ಮೊದಲ ದೃಷ್ಟಿ ಗೋಡೆಯ ಮೇಲೆ ಬೀಳುತ್ತದೆ. ಬೇರೆ ವಸ್ತುಗಳ ಮೇಲೆ, ವ್ಯಕ್ತಿಗಳ ಮೇಲೆ ವಕ್ರದೃಷ್ಟಿ ಬೀಳಿಸುವುದನ್ನು ತಪ್ಪಿಸುತ್ತದೆ.

ವಾಸ್ತು ಸಲಹೆ:ಲಿವಿಂಗ್‌ ರೂಂನ ದಿಕ್ಕು

ಮನೆಯ ಹಾಲ್‌ನ ದಿಕ್ಕಿನ ಬಗ್ಗೆಯೂ ಗಮನ ನೀಡುವುದು ಒಳ್ಳೆಯದು. ಲೀವಿಂಗ್‌ ರೂಂ ಈಶಾನ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಎಲ್ಲಾದರೂ ನಿಮಗೆ ಈಶಾನ್ಯ ದಿಕ್ಕಿನಲ್ಲಿಲೀವಿಂಗ್‌ ರೂಂ ಕಟ್ಟಲು ಅವಕಾಶ ದೊರಕಿಲ್ಲವೆಂದಾದರೆ ಪೂರ್ವ ದಿಕ್ಕಿನಲ್ಲಿನಿರ್ಮಿಸಿರಿ. ಕೆಲವೊಮ್ಮೆ ಮನೆ ಕಟ್ಟುವಾಗ ಇವೆರಡೂ ದಿಕ್ಕಿನಲ್ಲಿಲೀವಿಂಗ್‌ ರೂಂ ನಿರ್ಮಿಸುವ ಅವಕಾಶ ಇರುವುದಿಲ್ಲ. ಇಂತಹ ಸಂದರ್ಭದಲ್ಲಿಉತ್ತರ ದಿಕ್ಕಿನಲ್ಲಿಲೀವಿಂಗ್‌ ರೂಂ ನಿರ್ಮಿಸಬಹುದು ಎಂದು ವಾಸ್ತು ಬಲ್ಲವರು ಹೇಳುತ್ತಾರೆ.

ವಾಸ್ತು ಸಲಹೆ: ನಿಮ್ಮ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲಾಗಿದೆಯೇ?

ವಾಸ್ತು ಸಲಹೆ: ಎಲ್ಲಿ ಕುಳಿತುಕೊಳ್ಳಬೇಕು?

ಮನೆಯ ಯುಜಮಾನ ಮತ್ತು ಇತರೆ ಸದಸ್ಯರು ಲೀವಿಂಗ್‌ ರೂಂನ ಇಂತಹದ್ದೇ ಸ್ಥಳದಲ್ಲಿಕೂತರೆ ಹೆಚ್ಚು ಶ್ರೇಯಸ್ಸು ಎಂದು ವಾಸ್ತ್ರುಶಾಸ್ತ್ರ ಹೇಳುತ್ತದೆ. ಮನೆಯ ಯುಜಮಾನ ಲೀವಿಂಗ್‌ ರೂಂಣ ನೈರುತ್ಯ ಭಾಗದಲ್ಲಿಕುಳಿತುಕೊಳ್ಳಬೇಕು. ಮುಖ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇದ್ದರೆ ಒಳ್ಳೆಯದು. ಮನೆಗೆ ಆಗಮಿಸುವ ಅತಿಥಿಗಳು ಮನೆಯ ಯುಜಮಾನನ ಮುಂದೆ ಕುಳಿತರೆ ಅವರ ಮುಖ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ರಿಬೇಕು. ಪೂರ್ವ ಅಥವಾ ಉತ್ತರಕ್ಕೆ ಮುಖ್ಯದ್ವಾರ ಹೊಂದಿರುವ ಮನೆಗಳಲ್ಲಿಲೀವಿಂಗ್‌ ರೂಂ ಈಶಾನ್ಯ ಭಾಗದಲ್ಲಿಯೇ ಇರಬೇಕು.

ಈ ರೀತಿ ಲೀವಿಂಗ್‌ ರೂಂನಲ್ಲಿಸರಿಯಾದ ದಿಕ್ಕಿನಲ್ಲಿಯುಜಮಾನ ಮತ್ತು ಮನೆಯ ಸದಸ್ಯರು ಕುಳಿತರೆ ಈಶಾನ್ಯ, ಪೂರ್ವ ಮತ್ತು ಉತ್ತರ ದಿಕ್ಕುಗಳಿಂದ ಸಕಾರಾತ್ಮಕ ವೈಬ್ರೆಷನ್‌ಗಳು ಆಗಮಿಸುತ್ತವೆ ಮತ್ತು ಇದರಿಂದ ಮನೆಯಲ್ಲಿರುವ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ವಾಸ್ತು ಸಲಹೆ: ಎಷ್ಟು ಬಾಗಿಲುಗಳು ಇರಬೇಕು?

ಲೀವಿಂಗ ರೂಂಗೆ ಎಷ್ಟು ಬೇಕಾದರೂ ಬಾಗಿಲು ಇಡಬಹುದು. ಆದರೆ, ಬಾಗಿಲುಗಳು ಸರಿಯಾದ ಸ್ಥಳದಲ್ಲಿಇರುವುದು ಮುಖ್ಯ.

ವಾಸ್ತು ಸಲಹೆ: ಟೀವಿ ಎಲ್ಲಿಡಬೇಕು?

ಉತ್ತರ ದಿಕ್ಕಿನಲ್ಲಿಟೀವಿ ಇಡುವುದು ಸೂಕ್ತ. ಇದರಿಂದ ಮನೆಯ ಸದಸ್ಯರೆಲ್ಲರ ಮುಖ ಟೀವಿ ನೋಡುವಾಗ ಪೂರ್ವ ದಿಕ್ಕಿನತ್ತ ಇರುತ್ತದೆ. ಇದರಿಂದ ಮನೆಯ ಸದಸ್ಯರ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿಯೂ ಟೀವಿ ಇಡಬಹುದು. ಇಂತಹ ಸಂದರ್ಭದಲ್ಲಿಟೀವಿ ನೋಡಲು ಮನೆಯ ಸದಸ್ಯರು ನೈರುತ್ಯ ದಿಕ್ಕಿನಲ್ಲಿಕುಳಿತುಕೊಳ್ಳಬೇಕಾಗುತ್ತದೆ. ಈ ರೀತಿ ಕುಳಿತರೆ ಭದ್ರತೆ, ಅದೃಷ್ಟ, ಗೆಲುವು ನಿಶ್ಚಿತ. ನೈರುತ್ಯ, ಆಗ್ನೇಯ ಮತ್ತು ವಾಯುವ್ಯ ದಿಕ್ಕಿನಲ್ಲಿಟಿವಿ ಇಡಬಾರದು. ಹೀಗಾಗಿ, ಹೊಸ ಮನೆ ಕಟ್ಟಿದಾಗ ಮನೆಯ ಹಾಲ್‌ನಲ್ಲಿಟೀವಿಯನ್ನು ಸರಿಯಾದ ಸ್ಥಳದಲ್ಲಿಡಿ.

ಇದರೊಂದಿಗೆ ಲೀವಿಂಗ್‌ ರೂಂನಲ್ಲಿಸಕಾರಾತ್ಮಕ ವೈಬ್ರೆಷನ್‌ ಹೆಚ್ಚಿಸುವ ಸಂಗೀತ ಇದ್ದರೆ ಒಳ್ಳೆಯದು. ಇದರೊಂದಿಗೆ ಸಕಾರಾತ್ಮಕ ಶಕ್ತಿ ಹೆಚ್ಚಿಸುವಂತಹ ವಸ್ತುಗಳು ಲೀವಿಂಗ್‌ ಕೊಠಡಿಯಲ್ಲಿಇರಲಿ. ಲೀವಿಂಗ್‌ ಕೊಠಡಿಯಲ್ಲಿಇರುವಾಗ ಮನಸ್ಸು ಆಹ್ಲಾದವಾಗಿರುವಂತೆ ಕೊಠಡಿಯ ವಿನ್ಯಾಸ ಇರಲಿ.