ನಾಲ್ಕುನಗರಗಳಲ್ಲಿ ಜಿಯೋ 5ಜಿ ಆರಂಭ: ಇಂಟರ್ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ?

ರಿಲಯನ್ಸ್ ಜಿಯೋ ತನ್ನ 5G ಸೇವೆಯನ್ನು ಕೆಲವೇ ದಿನಗಳ ಹಿಂದೆ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2022 ಈವೆಂಟ್‌ನಲ್ಲಿ ಪ್ರಾರಂಭಿಸಿತು. Jio 5G ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಲಭ್ಯವಿದೆ.

Jio 5G ವೆಲ್ಕಮ್ ಆಫರ್ ಅಡಿಯಲ್ಲಿ, ಕಂಪನಿಯು ಅರ್ಹ ಬಳಕೆದಾರರಿಗೆ 1gbps ಉಚಿತ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಇದೀಗ ಜಿಯೋ 5ಜಿಯ ವೇಗ ಎಷ್ಟಿದೆ ಎಂಬ ಕುರಿತು ಎಲ್ಲರ ಕುತೂಹಲ ನೆಟ್ಟಿದೆ.

ಓಕ್ಲಾಸ್ ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ ವರದಿಯ ಪ್ರಕಾರ, ಟೆಲಿಕಾಂ ಆಪರೇಟರ್‌ಗಳಾದ ಜಿಯೋ ಮತ್ತು ಏರ್‌ಟೆಲ್ ಸ್ವಲ್ಪ ಸಮಯದವರೆಗೆ ತಮ್ಮ 5G ಸೇವೆಯನ್ನು ಪರೀಕ್ಷಿಸುತ್ತಿವೆ ಮತ್ತು 809.94mbps ವರೆಗೆ 5G ಡೌನ್‌ಲೋಡ್ ವೇಗವ ಕಂಡಿವೆ. ನಿರ್ವಾಹಕರು ಇನ್ನೂ ತಮ್ಮ ನೆಟ್‌ವರ್ಕ್‌ಗಳನ್ನು ಮರುಮಾಪನ ಮಾಡುತ್ತಿದ್ದಾರೆ ಎಂಬ ಅಂಶವನ್ನು ಈ ಡೇಟಾ ಸೂಚಿಸುತ್ತದೆ.
ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ವಾರಣಾಸಿಯಲ್ಲಿ ಜಿಯೋ ಮತ್ತು ಏರ್‌ಟೆಲ್ ನೀಡುತ್ತಿರುವ ಡೇಟಾ ವೇಗ ಪರಿಶೀಲಿಸಿದಾಗ ಜಿಯೋ ಸದ್ಯಕ್ಕೆ ಹೆಚ್ಚಿನ ವೇಗ ನೀಡುತ್ತಿದೆ ಎನ್ನಲಾಗಿದೆ.