Morning Breakfast: ಬೆಳಗಿನ ತಿಂಡಿಗೆ ಬಿಸಿ ಬಿಸಿ ಬೀಟ್ರೂಟ್ ದೋಸೆ ಮಾಡಿ

ಬೀಟ್ರೂಟ್ ದೋಸೆ ಪಾಕ ವಿಧಾನ ಮಾಡುವುದು ಹೇಗೆ ಎಂದು ನಾವು ಇಂದು ಇಲ್ಲಿ ತಿಳಿಯೋಣ. ತ್ವರಿತ ಕ್ರಿಸ್ಪಿ ಆರೋಗ್ಯಕರ ಬೀಟ್ರೂಟ್ ಪಿಂಕ್ ದೋಸೆ ಮಾಡಿ ನೀವು ಸವಿಯಲು ಉತ್ಸುಕರಾಗಿದ್ದರೆ ಅದರ ರೆಸಿಪಿ ತಿಳಿಯಿರಿ. ಆರೋಗ್ಯಕರ ಮತ್ತು ಟೇಸ್ಟಿ ದೋಸೆ ಪಾಕವಿಧಾನಗಳಲ್ಲಿ ಒಂದಾಗಿದೆ ಬೀಟ್ರೂಟ್ ದೋಸೆ. ಇದು ಬೆಳಗಿನ ಉಪಹಾರಕ್ಕೆ ಅತ್ಯುತ್ತಮ

ಬೀಟ್ರೂಟ್ ದೋಸೆ ಪಾಕ ವಿಧಾನಕ್ಕೆ ಬೇಕಾಗುವ ಪದಾರ್ಥಗಳು

ಅರ್ಧ ಕಪ್ ಬೀಟ್ರೂಟ್, ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವಾ , ಉಪ್ಪು, ಮೂರು ಕಪ್ ನೀರು, ಸಣ್ಣದಾಗಿ ಕೊಚ್ಚಿದ ಒಂದು ಈರುಳ್ಳಿ, ಎರಡು ಸಣ್ಣದಾಗಿ ಕೊಚ್ಚಿದ ಮೆಣಸಿನಕಾಯಿ, ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಹೆಚ್ಚಿದ ಕೆಲವು ಕರಿಬೇವಿನ ಎಲೆಗಳು, ಒಂದು ಟೀ ಸ್ಪೂನ್ ಜೀರಿಗೆ, ಎಣ್ಣೆ (ಹುರಿಯಲು)

ಬೀಟ್ರೂಟ್ ದೋಸೆ ಮಾಡುವ ವಿಧಾನ

ಮೊದಲು ಮಿಕ್ಸರ್ ಜಾರ್ ನಲ್ಲಿ ಅರ್ಧ ಕಪ್ ಬೀಟ್ರೂಟ್ ಮತ್ತು ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ. ಎರಡನ್ನೂ ನಯವಾದ ಪೇಸ್ಟ್ ಆಗುವಂತೆ ರುಬ್ಬಿರಿ. ಬೀಟ್ರೂಟ್ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವಾ, ಮುಕ್ಕಾಲು ಟೀ ಸ್ಪೂನ್ ಉಪ್ಪು ಮತ್ತು ಮೂರು ಕಪ್ ನೀರು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

ಈಗ ಅರ್ಧ ಸಣ್ಣಗೆ ಕೊಚ್ಚಿದ ಈರುಳ್ಳಿ, ಎರಡು ಸಣ್ಣಗೆ ಕೊಚ್ಚಿದ ಮೆಣಸಿನಕಾಯಿ, ಸಣ್ಣಗೆ ಕೊಚ್ಚಿದ ಕೊತ್ತಂಬರಿ, ಕೆಲವು ಕರಿಬೇವಿನ ಎಲೆಗಳು ಮತ್ತು ಒಂದು ಟೀಸ್ಪೂನ್ ಜೀರಿಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ರವೆ ಚೆನ್ನಾಗಿ ನೆನೆಸಲು 10 ನಿಮಿಷ ಇಡಿ. ನಂತರ ಹಿಟ್ಟು ಸ್ಥಿರತೆ ಹೊಂದಿದ್ಯಾ ಎಂದು ನೋಡಿ. ನಂತರ ಪ್ಯಾನ್ ಅನ್ನು ಬಿಸಿ ಮಾಡಿ. ಪ್ಯಾನ್ ಮೇಲೆ ಹಿಟ್ಟನ್ನು ಹಾಕಿ ದುಂಡನೆಯ ಆಕಾರಕ್ಕೆ ತನ್ನಿ. ಒಂದು ಟೀ ಸ್ಪೂನ್ ಎಣ್ಣೆ ಅದರ ಮೇಲೆ ಹಾಕಿ ಹರಡಿ. ಮತ್ತು ಎರಡು ನಿಮಿಷಗಳ ಕಾಲ ಎರಡು ಬದಿಯನ್ನು ಚೆನ್ನಾಗಿ ಗರಿ ಗರಿಯಾಗುವವರೆಗೆ ಬೇಯಿಸಿ. ನಿಮ್ಮಿಷ್ಟದ ಚಟ್ನಿ ಜೊತೆ ಬೀಟ್ರೂಟ್ ದೋಸೆ ಸವಿಯಿರಿ