sweet bonda: ರುಚಿಯಾದ ಸಿಹಿ ಬೋಂಡಾ ಮಾಡುವುದು ಹೇಗೆ ಅಂತಾ ತಿಳಿದಿದೆಯಾ?

ಬೇಕಾಗುವ ಪದಾರ್ಥಗಳು.

  • ಗೋಧಿ ಹಿಟ್ಟು: 1 ಕಪ್
  • ತುರಿದ ತೆಂಗಿನಕಾಯಿ: 1 ಕಪ್
  • ಬೆಲ್ಲ (ಪುಡಿ): 1.5 ಕಪ್
  • ಏಲಕ್ಕಿ ಪುಡಿ: 1/2 ಟೀಚಮಚ
  • ತುಪ್ಪ: 2 ಟೀಚಮಚ
  • ಕರೆಯಲು ಸಾಕಷ್ಟು ಎಣ್ಣೆ

ಮಾಡುವ ವಿಧಾನಗಳು

ತೆಂಗಿನಕಾಯಿ ತುರಿ ಮತ್ತು 3/4 ಕಪ್ ಬೆಲ್ಲದೊಂದಿಗೆ ಹೂರಣ ತಯಾರಿಸಿ. ಒಂದು ಕಪ್ ನೀರನ್ನು ಕುದಿಸಿ ಮತ್ತು ಅದರಲ್ಲಿ 3/4 ಕಪ್ ಬೆಲ್ಲವನ್ನು ಕರಗಿಸಿ.
ಅದು ತಣ್ಣಗಾದ ನಂತರ ಅದಕ್ಕೆ ಗೋಧಿ ಹಿಟ್ಟು, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ. ನಂತರ ಇಡ್ಲಿ ಹಿಟ್ಟಿನಂತೆ ಸ್ಥಿರತೆ ಬರುವವರೆಗು ಚೆನ್ನಾಗಿ ಮಿಶ್ರಣ ಮಾಡಿ.
ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ. ಮಧ್ಯಮ ಗಾತ್ರದಲ್ಲಿ ಹೂರಣದ ಉಂಡೆಗಳನ್ನು ಮಾಡಿಕೊಳ್ಳಿ. ಅವುಗಳನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ಎಣ್ಣೆಯಲ್ಲಿ ಬೇಯಿಸಿ. ಚೆನ್ನಾಗಿ ಬೆಂದ ಮೇಲೆ ಹೊರತೆಗೆಯಿರಿ. ಈಗ ರುಚಿಯಾದ ಸಿಹಿ ಬೋಂಡಾ ಸಿವಿಯಲು ರೆಡಿ.