ಮಂಗಳೂರು ಶೈಲಿಯ ಬಂಗಡೆ ಮೀನಿನ ಪುಳಿಮುಂಚಿ

ಮಾಂಸಾಹಾರಗಳಲ್ಲಿ ಎಲ್ಲರೂ ಇಷ್ಟಪಡುವುದೆಂದರೆ ಅದು ಮೀನಿನ ಆಹಾರಗಳು, ಮೀನು ಸಾರು ಇದ್ದಾಗ ಊಟದ ಮಜಾನೇ ಬೇರೆ. ಅದರಲ್ಲೂ ತಿನ್ನಲು ಸುಲಭವಾದ, ರುಚಿಕರವಾದ ಮೀನೆಂದರೆ ಬಂಗಡೆ ಮೀನು. ಈ ಮೀನಿನಿಂದ ತಯಾರಿಸಿದ ಫ್ರೈ, ಸಾರು ಕೂಡ ತುಂಬಾ ರುಚಿಯಾಗಿರುತ್ತದೆ.

ಮೀನಿನಿಂದ ಆಹಾರ ತಯಾರಿಸುವಾಗ ಬಹಳ ಮುಖ್ಯವಾಗಿ ಹಾಕಬೇಕಾಗಿರುವುದು ಉಪ್ಪು, ಹುಳಿ, ಖಾರ. ಇವುಗಳನ್ನು ಸಮಪ್ರಮಾಣದಲ್ಲಿ ಹಾಕಿದರೆ ಮಾತ್ರ ಆ ಸಾರು ರುಚಿಕರವಾಗಿರುತ್ತದೆ. ಈ ಉಪ್ಪು, ಹುಳಿ, ಖಾರ ಹಾಕಿ ಬಂಗಡೆ ಮೀನಿನ ಪುಳಿಮುಂಚಿ ಮಾಡಿ ನೋಡಿ.

ಬಂಗಡೆ ಮೀನಿನ ಪುಳಿಮುಂಚಿ ಮಾಡಲು ಯಾವ ಯಾವ ಸಾಮಾಗ್ರಿಗಳು ಬೇಕೆಂದು ನೋಡೋಣ :
ಬಂಗಡೆ ಮೀನು ½ ಕೆ.ಜಿ, ಒಣಮೆಣಸು 20, ಕಾಳುಮೆಣಸು 1 ಚಮಚ, ಜೀರಿಗೆ 1 ಚಮಚ, ಮೆಂತೆ ¼ ಚಮಚ, ದನಿಯಾ 3 ಚಮಚ, ಹುಣಸೇಹಣ್ಣು 1 ½ ಲಿಂಬೆ ಹಣ್ಣಿನ ಗಾತ್ರದಷ್ಟು, ಬೆಳ್ಳುಳ್ಳಿ ಎಸಳು 10 ( ಸಿಪ್ಪೆ ತೆಗೆದಿರಬೇಕು), ಶುಂಠಿ 1 ಇಂಚು, ಈರುಳ್ಳಿ ½ , ಅರಶಿನ 1 ಚಿಟಿಕೆ, ಕೊಬ್ಬರಿ ಎಣ್ಣೆ 4 ಚಮಚ, ಉಪ್ಪು ರುಚಿಗೆ ತಕಷ್ಟು.

ಬಂಗಡೆ ಮೀನಿನ ಪುಳಿಮುಂಚಿ ಮಾಡುವ ವಿಧಾನ

ಮೊದಲು ಮೀನನ್ನು ಶುಚಿ ಮಾಡಿ ಮೂರು ಭಾಗಮಾಡಿ ಕತ್ತರಿಸಿಟ್ಟುಕೊಂಡಿರಿ. ನಂತರ ಒಂದು ಬಾಣಲೆಯನ್ನು ಬಿಸಿ ಮಾಡಿಕೊಂಡು ಅದರಲ್ಲಿ ಒಣಮೆಣಸು, ಕಾಳುಮೆಣಸು, ಜೀರಿಗೆ, ಮೆಂತೆ, ದನಿಯಾ ಇವಿಷ್ಟು ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಿ. ಇವುಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಇವುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಬೆಳ್ಳುಳ್ಳಿ ಎಸಳು , ಶುಂಠಿ, ಈರುಳ್ಳಿ, ಅರಶಿನ, ಹುಣಸೇಹಣ್ಣು ಹಾಕಿ ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಹಾಕಿ ಅದು ಕಾದ ನಂತರ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ರುಚಿಗೆ ತಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಸಿ. ಅದು ಕುದಿಯಲು ಆರಂಭವಾದಾಗ ಮೀನಿನ ತುಂಡುಗಳನ್ನು ಹಾಕಿ ಸಣ್ಣ ಉರಿಯಲು ಮಸಾಲೆ ಗಟ್ಟಿಯಾಗುವವರೆಗೂ ಕುದಿಸಿರಿ. ನಂತರ ಅದನ್ನು ಉರಿಯಿಂದ ಇಳಿಸಿದರೆ ರುಚಿಯಾದ ಬಂಗಡೆ ಮೀನಿನ ಪುಳಿಮುಂಚಿ ತಿನ್ನಲು ರೆಡಿ.