ದೇಶ

ಜಿಲ್ಲೆಯಲ್ಲಿ  ಡಿ.14 ರಂದು  5  ನಮ್ಮ ಕ್ಲಿನಿಕ್‍ಗಳ ಉದ್ಘಾಟನೆ

ಗದಗ:   ನಗರ ಮತ್ತು ಪಟ್ಟಣ ಪ್ರದೇಶದ ಜನೆತೆಗೆ ಗುಣಮಟ್ಟದ ವೈದ್ಯಕೀಯ ಸೇವೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿರುವ ನಮ್ಮ ಕ್ಲಿನಿಕ್‍ಗಳು ಗದಗ ಜಿಲ್ಲೆಯಲ್ಲಿ ಆರಂಭಗೊಳ್ಳಲಿವೆ. ಗದಗ ಜಿಲ್ಲೆಗೆ ಒಟ್ಟು 11 ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಮಂಜೂರಾಗಿದ್ದು, ಸದರಿ 11 ನಮ್ಮ ಕ್ಲಿನಿಕ್‍ಗಳಲ್ಲಿ 5 ನಮ್ಮ ಕ್ಲಿನಿಕ್‍ಗಳು ದಿ.14.12.2022 ರಂದು ತಲಾ ಒಂದರಂತೆ ನಮ್ಮ ಕ್ಲಿನಿಕ್‍ಗಳನ್ನು ಗದಗ ನಗರದ ಜವಳಗಲ್ಲಿ ಓಣಿಯಲ್ಲಿ 1, ನರಗುಂದ ನಗರದ ಜಮಲಾಪೂರ ಓಣಿಯಲ್ಲಿ 1, ಮುಂಡರಗಿ ನಗರದ ದೊಸಿಗರ್ ಓಣಿಯಲ್ಲಿ […]

ಜಿಲ್ಲೆಯಲ್ಲಿ  ಡಿ.14 ರಂದು  5  ನಮ್ಮ ಕ್ಲಿನಿಕ್‍ಗಳ ಉದ್ಘಾಟನೆ Read More »

೧೮ರಂದು ಒನಕೆ ಓಬವ್ವ ಜಯಂತ್ಯುತ್ಸವ

ಗದಗಒನಕೆ ಓಬವ್ವ ಸಾಮಾನ್ಯ ಮಹಿಳೆಯಾದರೂ ರಾಜನಿಷ್ಠೆ, ಸ್ವಾಮಿನಿಷ್ಠೆಗಾಗಿ ಹೈದರಾಲಿ ಸೈನ್ಯವನ್ನು ಕೋಟೆ ಪ್ರವೇಶಿಸದಂತೆ ಮಾಡಿದಳು. ಆ ತಾಯಿಯ ೩೦೧ನೆ ಜಯಂತಿ ಕಾರ್ಯಕ್ರಮವನ್ನು ಇದೇ ಡಿ. ೧೮ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಗುರುಪೀಠದ ಜ.ಬಸವನಾಗಿದೇವ ಶರಣರು ಹೇಳಿದರು.ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ೩೧ ಜಿಲ್ಲೆಗಳಿಂದಲೂ ಸಮಾಜದ ಜನ ಭಾಗವಹಿಸಲಿದ್ದಾರೆ. ಅಂದಾಜು ೧ ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ಜಯಂತ್ಯುತ್ಸವ ಕಾರ್ಯಕ್ರಮದ ಮೂಲಕ ಒನಕೆ

೧೮ರಂದು ಒನಕೆ ಓಬವ್ವ ಜಯಂತ್ಯುತ್ಸವ Read More »

ಡಿ.14ಕ್ಕೆ ಶ್ರೀಶೈಲಂನಲ್ಲಿ ಲಕ್ಷದೀಪೋತ್ಸವ

ಗದಗ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಲಕ್ಷದೀಪೋತ್ಸವ ಕಾರ್ಯಕ್ರಮ ಡಿ. ೧೪ರಂದು ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ೧೪ ಜಿಲ್ಲೆಗಳಿಂದ ೧೦ ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ ಎಂದು ಶ್ರೀ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ಅಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ ಹೇಳಿದರು.ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ೧೧ ವರ್ಷಗಳಿಂದ ಶ್ರೀಶೈಲಂನಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಂದು ಬೆಳಗ್ಗೆ ೯ ಗಂಟೆಗೆ

ಡಿ.14ಕ್ಕೆ ಶ್ರೀಶೈಲಂನಲ್ಲಿ ಲಕ್ಷದೀಪೋತ್ಸವ Read More »

೧೮ರಂದು ಒನಕೆ ಓಬವ್ವ ಜಯಂತ್ಯುತ್ಸವ

ಗದಗಒನಕೆ ಓಬವ್ವ ಸಾಮಾನ್ಯ ಮಹಿಳೆಯಾದರೂ ರಾಜನಿಷ್ಠೆ, ಸ್ವಾಮಿನಿಷ್ಠೆಗಾಗಿ ಹೈದರಾಲಿ ಸೈನ್ಯವನ್ನು ಕೋಟೆ ಪ್ರವೇಶಿಸದಂತೆ ಮಾಡಿದಳು. ಆ ತಾಯಿಯ ೩೦೧ನೆ ಜಯಂತಿ ಕಾರ್ಯಕ್ರಮವನ್ನು ಇದೇ ಡಿ. ೧೮ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಗುರುಪೀಠದ ಜ.ಬಸವನಾಗಿದೇವ ಶರಣರು ಹೇಳಿದರು.ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ೩೧ ಜಿಲ್ಲೆಗಳಿಂದಲೂ ಸಮಾಜದ ಜನ ಭಾಗವಹಿಸಲಿದ್ದಾರೆ. ಅಂದಾಜು ೧ ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ಜಯಂತ್ಯುತ್ಸವ ಕಾರ್ಯಕ್ರಮದ ಮೂಲಕ ಒನಕೆ

೧೮ರಂದು ಒನಕೆ ಓಬವ್ವ ಜಯಂತ್ಯುತ್ಸವ Read More »

ಸ್ವಸಹಾಯ ಸಂಘಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕಾಣಿಕೆ

ಗದಗ: ಕೌಶಲ್ಯತೆಯು ರಾಷ್ಟ್ರೀಯ ಅವಶ್ಯಕತೆ ಮತ್ತು ಸ್ವಾವಲಂಬಿ ಭಾರತದ ಅಡಿಪಾಯವಾಗಿದ್ದು, ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಕೌಶಲ್ಯಾಭಿವೃದ್ಧಿ ನೆರವಾಗಲಿದೆ ಎಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದರು. ಸೋಮವಾರ ಇಲ್ಲಿನ 15ನೇ ವಾರ್ಡಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಸ್ವಸಹಾಯ ಸಂಘಗಳ ಎರಡು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವೃತ್ತಿಯಲ್ಲಿ ಕೌಶಾಲ್ಯಭಿವೃದ್ಧಿಯು ಆರ್ಥಿಕ ಸ್ವಾವಲಂಬನೆ ಬದುಕು ಸಾಗಿಸಲು ನೆರವಾಗಲಿದೆ. ಸ್ವಸಹಾಯ ಸಂಘಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕಾಣಿಕೆ

ಸ್ವಸಹಾಯ ಸಂಘಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕಾಣಿಕೆ Read More »

ಮಧ್ಯರಾತ್ರಿ ಪ್ರಿಯತಮೆಯನ್ನು ಭೇಟಿಯಾಗಲು ಮನೆಗೆ ಬಂದ ಯುವಕ; ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ!

ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಮಧ್ಯರಾತ್ರಿ ಭೇಟಿ ನೀಡಿದ್ದು, ಈ ವೇಳೆ ಉಂಟಾದ ಸದ್ದಿನಿಂದಾಗಿ ಮನೆಯವರು ಎಚ್ಚೆತ್ತಾಗ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಪರದಾಡಿದ್ದಾನೆ. ಇಂತಹದೊಂದು ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿನ ಗ್ರಾಮವೊಂದರ ಯುವಕ ಅದೇ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಭೇಟಿ ನೀಡಿದ್ದಾನೆ. ಇವರಿಬ್ಬರೂ ಏಕಾಂತದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕುಟುಂಬಸ್ಥರಿಗೆ ಎಚ್ಚರವಾಗಿದೆ. ಆಗ ಗಾಬರಿಗೊಂಡ ಆತ ತಪ್ಪಿಸಿಕೊಳ್ಳಲು ಓಡಿದ್ದು, ತೆರೆದ ಬಾವಿಗೆ

ಮಧ್ಯರಾತ್ರಿ ಪ್ರಿಯತಮೆಯನ್ನು ಭೇಟಿಯಾಗಲು ಮನೆಗೆ ಬಂದ ಯುವಕ; ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ! Read More »

ಮಣ್ಣಿನ ಆರೋಗ್ಯವೇ ಕೃಷಿಯ ಆರೋಗ್ಯ

ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳಲ್ಲಿ ಮಣ್ಣು ಅತ್ಯಮೂಲ್ಯವಾದುದು. ಜೀವಿಗಳ ‘ಜೀವ’ವಾಗಿರುವ ಮಣ್ಣು ಒಂದು ಸಜೀವ ವಸ್ತು. ಸಸ್ಯ ಮತ್ತು ಪ್ರಾಣಿ ಸಂಕುಲದ ಅಳಿವು ಅಥವಾ ಉಳಿವಿಗೆ ಮಣ್ಣು ಮೂಲ ಕಾರಣ. ಕೃಷಿಗೆ ಇದು ಮೂಲಭೂತವಾದ ವಸ್ತು. ಮಣ್ಣಿನ ಆರೋಗ್ಯವೇ ಕೃಷಿಯ ಆರೋಗ್ಯ. ಕೃಷಿಯ ಆರೋಗ್ಯವೇ ದೇಶದ ಆರೋಗ್ಯ.೧೫ ನೇ ಶತಮಾನದಲ್ಲಿ ಶ್ರೀ ಪುರಂದರದಾಸರು ‘ಮಣ್ಣಿಂದ ಕಾಯ’ ಎಂಬ ಪದ್ಯದಲ್ಲಿ ಮಣ್ಣಿನ ಮಹತ್ವ, ಮಣ್ಣು ಮತ್ತು ಮಾನವ ಸಂಬAಧಗಳ ಬಗ್ಗೆ ತಿಳಿಸುತ್ತಾ ‘ಮಣ್ಣು ಅಳಿದರೆ ಮಾನವ ಅಳಿದಂತೆ’ ಎಂದು ಹೇಳಿದ

ಮಣ್ಣಿನ ಆರೋಗ್ಯವೇ ಕೃಷಿಯ ಆರೋಗ್ಯ Read More »

ದಿವ್ಯಾಂಗರು ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲಬೇಕು : ಕೃಷ್ಣಗೌಡ ಪಾಟೀಲ

ಗದಗ : ದಿವ್ಯಾಂಗರಿಗೆ ಅಂಗವಿಕಲತೆ ಶಾಪವಲ್ಲ ಅದನ್ನು ಮೆಟ್ಟಿ ನಿಂತು ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಯುವ ಮುಖಂಡ ಕೃಷ್ಣಗೌಡ ಪಾಟೀಲ ಅವರು ಹೇಳಿದರು. ನಗರದ ಕರ್ನಾಟಕ ಭವನದಲ್ಲಿ ಭಾನುವಾರ ಉತ್ತರ ಕರ್ನಾಟಕ ದಿವ್ಯಾಂಗರ ಕ್ಷೇಮಾಭಿವೃದ್ಧಿ ಸಂಘದಿAದ ಹಮ್ಮಿಕೊಂಡ ಜಿಲ್ಲಾಮಟ್ಟದ ದಿವ್ಯಾಂಗರ ಮಹಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ, ದಿವ್ಯಾಂಗರು ಕೂಡ ಎಲ್ಲರಂತೆ ಜೀವನ ರೂಪಿಸಿಕೊಳ್ಳಬಹುದಾಗಿದೆ. ದಿವ್ಯಾಂಗರ ಸಮಸ್ಯೆಗಳಿಗೆ ಸ್ಪಂಧಿಸಲು ನಗರದ ಕಾಟನ್ ಸೇಲ್ ಸೋಸಾಯಿಟಿಯು ಸದಾ ತೆರೆದಿರುತ್ತದೆ. ಸರಕಾರದದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ

ದಿವ್ಯಾಂಗರು ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲಬೇಕು : ಕೃಷ್ಣಗೌಡ ಪಾಟೀಲ Read More »

ಚಳಿಗೆ ʼಕಾಫಿ ಟೀ ಕುಡಿಯೋದುʼ ಆರೋಗ್ಯಕ್ಕೆ ಎಷ್ಟು ಸೇಫ್‌ ಗೊತ್ತಾ?

ಭಾರತದ ಅತ್ಯಂತ ಜನಪ್ರಿಯ ಪೇಯವೆಂದರೆ ಟೀ ಅಥವಾ ಚಹಾ. ಬೆಳಗ್ಗಿನ ಪ್ರಥಮ ಆಹಾರವಾಗಿ ಪ್ರಾರಂಭಿಸಿ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸುತ್ತಾ ಬಂದಿರುವ ಪೇಯವೇ ಚಹಾ. ಬೆಳಗ್ಗೆದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಹಲವರಿಗಿದೆ. ಮನೆಗೆ ಅತಿಥಿಗಳು ಬಂದಾಗ ಟೀ ಬಿಸ್ಕೆಟ್ ಸತ್ಕಾರವಂತೂ ನಡೆಯಲೇಬೇಕು. ಫ್ರೆಂಡ್ಸ್, ಫ್ಯಾಮಿಲಿ ಸೇರಿದಾಗ ಜತೆ ಟೀ ಕುಡಿಯುವ ಖುಷಿಯೇ ಬೇರೆ. ಹೀಗೆ ಭಾರತದಲ್ಲಿ ಹಲವು ನೆಪಗಳನ್ನೊಡ್ಡಿ ಜನರು ಟೀ ಕುಡಿಯೋಕೆ ಹೆಚ್ಚು ಉತ್ಸಾಹ ತೋರಿಸುತ್ತಾರೆ. ಇಂದಿಗೂ ಊರಿನ

ಚಳಿಗೆ ʼಕಾಫಿ ಟೀ ಕುಡಿಯೋದುʼ ಆರೋಗ್ಯಕ್ಕೆ ಎಷ್ಟು ಸೇಫ್‌ ಗೊತ್ತಾ? Read More »

road side For those who were worshiping the tree Truck Collision

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ : ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿಗೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗ ತಾಲೂಕಿನ ಕಲ್ಲಾಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿಗೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರು ದಾವಣಗೆರೆ ಮೂಲದವರಾಗಿದ್ದು, ವಿವೇಕ್ (21), ಕಾರ್ತಿಕ್ (21), ಮೋಹನ್ (21) ಮೃತ ಯುವಕರು, ರುದ್ರೇಶ್ ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ : ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು Read More »