Rashmi

ರುಚಿಕರವಾದ ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?

ದೋಸೆಗಳನ್ನು ತಿನ್ನಲು  ಹೆಚ್ಚಿನವರು ಇಷ್ಟಪಡುತ್ತಾರೆ. ಅದು ನಿಮ್ಮ ನಾಲಿಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದೇ ತರಹದ ದೋಸೆಗಳನ್ನು ತಿನ್ನತಿದ್ದರೆ ಬೇಜಾರಾಗಬಹುದು. ಆದ್ದರಿಂದ ದಿನಕ್ಕೊಂದು ವೆರೈಟಿ ದೋಸೆಗಳನ್ನು ಮಾಡಿ ತಿನ್ನಿ. ದೋಸೆಯಲ್ಲಿ ಹಲವು ವೆರೈಟಿ ದೋಸೆಗಳಿರುತ್ತವೆ. ನೀರ್ ದೋಸೆ, ಬೆಣ್ಣೆ ದೋಸೆ, ರವಾ ದೋಸೆ ಹೀಗೆ ಹಲವು ಬಗೆಯ ದೋಸೆಗಳಿವೆ. ಸೊಪ್ಪುಗಳು ಹಾಗೂ ತರಕಾರಿಗಳನ್ನು ಬಳಸಿ ಕೂಡ ದೋಸೆಗಳನ್ನು  ಮಾಡಬಹುದು. ಅದರಲ್ಲಿ ಒಂದಾದ ಟೊಮೆಟೊ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಾಗೆ ಸುಲಭವಾಗಿ ಕೂಡ ಮಾಡಬಹುದು. ಇದಕ್ಕೆ […]

ರುಚಿಕರವಾದ ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ? Read More »

ರುಚಿಯಾದ ತೊಡೆದೇವು ಸವಿದಿದ್ದೀರಾ…?

ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟ ಸಿಹಿತಿಂಡಿ. ಮಲೆನಾಡಿಗರ ಮನೆಮನೆಗಳಲ್ಲಿ ಈ ಸಾಂಪ್ರದಾಯಿಕ ತಿಂಡಿಗೆ ಪ್ರಮುಖ ಸ್ಥಾನವಿದೆ.  ತುಂಬ ಕಡಿಮೆ ವಸ್ತುಗಳನ್ನು ಬಳಸಿ ತಾಳ್ಮೆ ಹಾಗು ಜಾಣ್ಮೆಯಿಂದ ಮಾಡಬೇಕಾದ ತಿಂಡಿಯಿದು. ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತೊಡೆದೇವುವಿಗೆ ತುಂಬ ಬೇಡಿಕೆಯಿದೆ . ಆದರೆ ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ

ರುಚಿಯಾದ ತೊಡೆದೇವು ಸವಿದಿದ್ದೀರಾ…? Read More »

ಆರೋಗ್ಯಕ್ಕೆ ಉತ್ತಮವಾದ ಮೆಂತ್ಯಸೊಪ್ಪಿನ ಕಡುಬು

ಮೆಂತ್ಯಸೊಪ್ಪು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಮೆಂತ್ಯಸೊಪ್ಪಿನಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂಗಳಿವೆ. ಇದು ಚರ್ಮ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಷ್ಟೊಂದು ಉಪಯೋಗಕಾರಿಯಾದ ಮೆಂತ್ಯ ಸೊಪ್ಪು ಕಹಿ ಎಂದು ಅದನ್ನು ತಿನ್ನಲು ಕೆಲವರು ಇಷ್ಟಪಡುವುದಿಲ್ಲ. ಆದಕಾರಣ ಮೆಂತ್ಯ ಸೊಪ್ಪು ಎಂದಾಕ್ಷಣ ದೂರ ಓಡಿ ಹೋಗುವವರಿಗೆ ಅದರಿಂದ ರುಚಿ ರುಚಿಯಾದ ಕಡುಬು ಮಾಡಿಕೊಡಿ. ಒಂದು ಸಾರಿ ತಿಂದರೆ ಮತ್ತೆ ಬಿಡೋದೆ ಇಲ್ಲ. ಮೆಂತ್ಯಸೊಪ್ಪಿನ ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು  ಮೊದಲಿಗೆ 2

ಆರೋಗ್ಯಕ್ಕೆ ಉತ್ತಮವಾದ ಮೆಂತ್ಯಸೊಪ್ಪಿನ ಕಡುಬು Read More »

ಸರಳವಾಗಿ ಮಾಂಜಿ (ಪಾಂಪ್ರಟ್) ಫಿಶ್ ಫ್ರೈ ಮಾಡುವುದು ಹೇಗೆ?

ಮುಖ್ಯವಾಗಿ ಬ್ಯಾಚುಲರ್ ಗಳಿಗೆ ಎಲ್ಲಾ ಐಟಂ ಹಾಕಿ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಎಷ್ಟು ಸರಳ ರೆಸಿಪಿ ಇರುತ್ತದೆಯೋ ಅಂತಹ ರೆಸಿಪಿಯನ್ನು ಹುಡುಕುತ್ತಾರೆ. ಬ್ಯಾಚುಲರ್ಸ್ ಮಾತ್ರವಲ್ಲದೆ ಗೃಹಸ್ಥರಿಗೂ ಸರಳವಾಗಿ ಅಡುಗೆ ಮಾಡುವುದು ಇಷ್ಟವಾಗಬಹುದು. ಇಷ್ಟವಾಗದೆಯೂ ಇರಬಹುದು. ಪಾಂಪ್ರೆಟ್ ಅಥವಾ ಮಾಂಜಿ ಮೀನನ್ನು ಸರಳವಾಗಿ ಹೇಗೆ ಫ್ರೈ ಮಾಡಬಹುದು ಎಂದು ತಿಳಿದುಕೊಳ್ಳೋಣ. ಇಲ್ಲಿ ನಾನು ದೊಡ್ಡ ಗಾತ್ರದ ಅರ್ಧ ಕೆ.ಜಿ. ತೂಗುವ ಮಾಂಜಿ ಫಿಷ್ ಖರೀದಿಸಿದೆ. ಇದನ್ನು ಸ್ಲೈಸ್ ಆಗಿ ಕತ್ತರಿಸಿ, ತೊಳೆದು ಇಡಲಾಗಿದೆ. ಇದಕ್ಕೆ ಮಿಶ್ರ ಮಾಡಬೇಕಾದ ಸಿಂಪಲ್

ಸರಳವಾಗಿ ಮಾಂಜಿ (ಪಾಂಪ್ರಟ್) ಫಿಶ್ ಫ್ರೈ ಮಾಡುವುದು ಹೇಗೆ? Read More »

ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ

ಬೆಳಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ…? ಸುಲಭದ ಅಡುಗೆಯೆಂದರೆ ಬಟಾಣಿ ಬಲಾವ್.  ಅರೆ ಪಲಾವ್ ಮಾಡುವುದಕ್ಕೆ ಬೇಕಾದ ತರಕಾರಿ ಇಲ್ಲ ಎಂದು ಕೊಳ್ಳುತ್ತೀರಾ. ಆದರೆ ಈ ಬಟಾಣಿ ಪಲಾವ್ ಗೆ ತರಕಾರಿನೂ ಬೇಕಾಗಿಲ್ಲ. ಬಟಾಣಿ ಇದ್ದರೆ ಆಯ್ತು. ಹಸಿ ಬಟಾಣಿ ಇದ್ದರೂ ಆಯ್ತು. ಇಲ್ಲದಿದ್ದರೆ ನೆನಸಿಟ್ಟ ಬಟಾಣಿಯಾದರೂ ಆಯ್ತು. ಇವಿಷ್ಟಿದ್ದರೆ ರುಚಿ ರುಚಿಯಾದ ಪಲಾವ್ ಅನ್ನು ಸವಿಯಬಹುದು. ಬಟಾಣಿ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು 1ಕಪ್ ಬಾಸುಮತಿ ಅಕ್ಕಿ ತೆಗೆದುಕೊಳ್ಳಿ. ಅರ್ಧ ಕಪ್ ನೆನಸಿಟ್ಟುಕೊಂಡ

ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ Read More »

ಎಲ್ಲರಿಗೂ ಪ್ರಿಯವಾದ ಈರುಳ್ಳಿ ದೋಸೆ ಹೀಗೆ ಮಾಡಿ

ಹೋಟೆಲ್ ಗೆ ಹೋದಾಗ ಮಸಾಲೆದೋಸೆ, ಪ್ಲೈನ್ ದೋಸೆ ಸವಿದಿರುತ್ತೀರಿ. ಹಾಗೇ ಈರುಳ್ಳಿ ದೋಸೆನೂ. ಆದರೆ ಮನೆಯಲ್ಲಿ ಇದನ್ನು ಟ್ರೈ ಮಾಡುವುದು ಹೇಗೇ ಎಂದು ಯೋಚನೆ ಮಾಡುತ್ತೀದ್ದೀರಾ…? ಮನೆಯಲ್ಲಿಯೇ ಈರುಳ್ಳಿ ದೋಸೆ ಮಾಡುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ. ರುಚಿಯಾದ ಈರುಳ್ಳಿಯನ್ನು ದೋಸೆಯನ್ನು ಬೆಳಿಗ್ಗಿನ ಉಪಹಾರಕ್ಕಾಗಿ ನಿಮ್ಮ ಮನೆಯಲ್ಲಿ ತಯಾರಿಸಿ. ಈರುಳ್ಳಿ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು ಉದ್ದಿನಬೇಳೆ- 1/2 ಕಪ್  ತೆಗೆದುಕೊಳ್ಳಿ. ಹಾಗೇ ಅಕ್ಕಿ – 2 ಕಪ್‌ಗಳು, ಮೆಂತ್ಯ – 1ಚಮಚ .

ಎಲ್ಲರಿಗೂ ಪ್ರಿಯವಾದ ಈರುಳ್ಳಿ ದೋಸೆ ಹೀಗೆ ಮಾಡಿ Read More »

ಪುದೀನಾ ರೈಸ್ ಬಾತ್ ರೆಸಿಪಿ- ಬೆಳಗಿನ ಉಪಹಾರಕ್ಕೆ ಪುದೀನಾ ಅನ್ನ

ಮನೆಗೆ ತರಕಾರಿ ಸೊಪ್ಪು ತರುವಾಗ ಪುದೀನಾ ಕೊತ್ತಂಬರಿಸೊಪ್ಪನ್ನು ತರುತ್ತೇವೆ. ಪುದೀನಾದಿಂದ ಚಟ್ನಿ ಇತ್ಯಾದಿಗಳನ್ನು ಮಾಡುತ್ತೇವೆ ಇದೇ ಪುದೀನಾದಿಂದ ಒಂದೊಳ್ಳೆ ರೈಸ್ ಬಾತ್ ಕೂಡ ಮಾಡಬಹುದು. ಕೆಲವೊಮ್ಮೆ ಬೆಳಿಗ್ಗಿನ ತಿಂಡಿ ಮಾಡುವುದಕ್ಕೆ ಏನೂ ಇಲ್ಲದಾಗ ಈ ಪುದೀನಾದಿಂದ ಒಂದೊಳ್ಳೆ ಉಪಹಾರವನ್ನು ತಯಾರಿಸಿ ಮನೆಮಂದಿಯೆಲ್ಲಾ ಸವಿಯಿರಿ. ಮನೆಯಲ್ಲಿ ನಿನ್ನೆ ಮಾಡಿದ ಅನ್ನ ಉಳಿದಿದ್ದರೆ, ದಿನಾ ಅದೇ ಚಿತ್ರಾನ್ನ, ಲೆಮನ್ ರೈಸ್ ಮಾಡಿ ತಿಂದು ಬೇಜಾರಾಗಿದ್ದರೆ ಈ ಪುದೀನಾ ರೈಸ್ ಅನ್ನು ಒಮ್ಮೆ ಮಾಡಿ ಸವಿಯಿರಿ. ಪುದೀನಾ ಆರೋಗ್ಯಕ್ಕೂ ಕೂಡ ಬಹಳ

ಪುದೀನಾ ರೈಸ್ ಬಾತ್ ರೆಸಿಪಿ- ಬೆಳಗಿನ ಉಪಹಾರಕ್ಕೆ ಪುದೀನಾ ಅನ್ನ Read More »

ರವಾ ಇಡ್ಲಿ- ರುಚಿಕರ, ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ

ರವಾ ಇಡ್ಲಿ ಇದು ಆರೋಗ್ಯಕರವಾದ ತಿಂಡಿಯಾಗಿದ್ದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತ. ಇದನ್ನು ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಚಟ್ನಿ ಮತ್ತು ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂಬ ಯೋಚನೆಯಲ್ಲಿದ್ದವರಿಗೆ, ಮನೆಗೆ ದಿಡೀರ್ ಎಂದು ಯಾರಾದರೂ ಅತಿಥಿಗಳು ಬಂದಾಗ  ಈ ರವಾ ಇಡ್ಲಿ ಮಾಡಬಹುದು. ಇದನ್ನು ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ ಕೂಡ ಹೌದು.  ಇಡ್ಲಿ, ದೋಸೆ, ತಿಂದು ಬೇಜಾರಾದವರು ಈ ರವಾ ಇಡ್ಲಿ ಮಾಡಿ

ರವಾ ಇಡ್ಲಿ- ರುಚಿಕರ, ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ Read More »

ರೆಸಿಪಿ: ರುಚಿಕರ ಸಬ್ಬಕ್ಕಿ ಕಿಚಡಿ ಹೀಗೆ ಮಾಡಿ

ಕಿಚಡಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತಿಂಡಿ. ಆದರೆ ಕೆಲವರಿಗೆ ಇದನ್ನು ಮಾಡುವುದು ಹೇಗೆ ಎಂಬ ಚಿಂತೆಯೂ ಕಾಡುತ್ತಿರುತ್ತದೆ. ರುಚಿ ನೋಡಿರುವವರಿಗೆ ಇದನ್ನು ಮಾಡುವ ವಿಧಾನದ ಬಗ್ಗೆ ತಿಳಿಯಬೇಕೆನಿಸುವುದು ಸಹಜ, ಏಕೆಂದರೆ ಈ ಕಿಚಡಿ ಬೆಳಗಿನ ತಿಂಡಿಯಾಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ನಿಮಗೂ ಕೂಡ ಕಿಚಡಿ ಮಾಡುವುದು ಹೇಗೆ ಎಂಬ ಕುತೂಹಲವಿರಬಹುದಲ್ಲವೇ? ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ಇಲ್ಲಿದೆ ನೋಡಿ. ಹೆಸರುಬೇಳೆ ಕಿಚಡಿ, ರೈಸ್ ಕಿಚಡಿಯನ್ನೆಲ್ಲಾ ನೀವು ಸವಿದಿರುತ್ತೀರಿ. ನಾನಿಲ್ಲಿ ಸಾಬಕ್ಕಿ ಕಿಚಡಿ ಮಾಡುವುದರ ಕುರಿತು ಮಾಹಿತಿ ನೀಡಿದ್ದೇನೆ.

ರೆಸಿಪಿ: ರುಚಿಕರ ಸಬ್ಬಕ್ಕಿ ಕಿಚಡಿ ಹೀಗೆ ಮಾಡಿ Read More »

ಹೋಟೆಲ್ ಸ್ಟೈಲ್ ಮಸಾಲೆದೋಸೆ ಮನೆಯಲ್ಲಿಯೇ ರೆಡಿಮಾಡಿ

ಬೆಳಿಗ್ಗಿನ ತಿಂಡಿ ಏನು ಮಾಡಬೇಕು ಎಂಬುದೇ ಕೆಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ತಿಂದು ಬೋರು ಅನಿಸಿದ್ರೆ, ಒಮ್ಮೆ ಈ ಮಸಾಲ ದೋಸೆ ಪ್ರಯತ್ನಿಸಿ ನೋಡಿ.  ಮಸಾಲಾ ದೋಸೆ ಮನೆಯಲ್ಲಿ ಚೆನ್ನಾಗಿ ಬರುತ್ತಾ…?, ಕೆಟ್ಟು ಹೋದರೆ, ರುಚಿ ಬಾರದೇ ಇದ್ದರೆ, ಮನೆಯಲ್ಲಿ ಯಾರು ತಿನ್ನದೇ ಹೋದರೆ ಏನು ಗತಿ ಎಂದೆಲ್ಲಾ  ತಲೆಬಿಸಿ ತೆಗೆದುಕೊಳ್ಳಬೇಡಿ. ಇಲ್ಲಿ ಹೇಳಿರುವ ಪ್ರಕಾರ ಒಮ್ಮೆ ಟ್ರೈ ಮಾಡಿ ನೋಡಿ. ರುಚಿಕರವಾದ ಮಸಾಲಾ ದೋಸೆಯನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ. ಅಂದಹಾಗೇ ಮಾಡುವುದಕ್ಕೆ ಬೇಕಾದ

ಹೋಟೆಲ್ ಸ್ಟೈಲ್ ಮಸಾಲೆದೋಸೆ ಮನೆಯಲ್ಲಿಯೇ ರೆಡಿಮಾಡಿ Read More »